ADVERTISEMENT

ಬ್ಯಾಡಗಿ: ಶತಮಾನದ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 3:05 IST
Last Updated 19 ಸೆಪ್ಟೆಂಬರ್ 2025, 3:05 IST
ಬ್ಯಾಡಗಿ ಎಸ್‌ಜೆಜೆಎಂ ಕೆಪಿಎಸ್‌ ಶಾಲೆಯ ಆವರಣದಲ್ಲಿ ಸ್ಥಗಿತಗೊಂಡಿದ್ದ ಕಟ್ಟಡ ಕಾಮಗಾರಿ ಬುಧವಾರ ಪುನರಾರಂಭಗೊಂಡಿದೆ
ಬ್ಯಾಡಗಿ ಎಸ್‌ಜೆಜೆಎಂ ಕೆಪಿಎಸ್‌ ಶಾಲೆಯ ಆವರಣದಲ್ಲಿ ಸ್ಥಗಿತಗೊಂಡಿದ್ದ ಕಟ್ಟಡ ಕಾಮಗಾರಿ ಬುಧವಾರ ಪುನರಾರಂಭಗೊಂಡಿದೆ   

ಬ್ಯಾಡಗಿ: ಪಟ್ಟಣದ ಎಸ್‌ಜೆಜೆಎಂ ಕೆಪಿಎಸ್‌ ಶಾಲೆ ಶತಮಾನ ಪೂರೈಸಿದ್ದರೂ ಶೌಚಾಲಯ, ಶಿಥಿಲಗೊಂಡ ಕಟ್ಟಡ, ಅಪೂರ್ಣಗೊಂಡ ಕಾಮಗಾರಿ ಸೇರಿದಂತೆ ಅಲ್ಲಿಯ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ‘ಪ್ರಜಾವಾಣಿ‘ ಬುಧವಾರ ಶತಮಾನ ಪೂರೈಸಿದ ಶಾಲೆಯ ದುಸ್ಥಿತಿ ತಲೆ ಬರಹದಲ್ಲಿ ಮೂಲ ಸೌಲಭ್ಯಗಳ ಕುರಿತು ವರದಿ ಪ್ರಕಟಿಸಿತ್ತು.

ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತರ ಸೂಚನೆಯ ಹಿನ್ನೆಲೆಯಲ್ಲಿ ಬಿಇಒ ಎಸ್‌.ಜಿ.ಕೋಟಿ ಶಾಲೆಗೆ ಭೇಟಿ ನೀಡಿ ವರದಿ ಸಂಗ್ರಹಿಸಿದ್ದಾರೆ. ಶೌಚಾಲಯ, ಶಿಥಿಲಗೊಂಡ ಕಟ್ಟಡ, ಕೊಠಡಿಗಳ ಹಾಗೂ ಶಿಕ್ಷಕರ ಕೊರತೆಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

₹50 ಲಕ್ಷ ಅನುದಾನದಲ್ಲಿ ನಿರ್ಮಾಣ ಹಂತದಲ್ಲಿ ಸ್ಥಗಿತಗೊಂಡಿದ್ದ ಮೂರು ಕೊಠಡಿಗಳ ಕಟ್ಟಡ ಹಾಗೂ ಶೌಚಾಲಯಗಳ ಗೋಡೆಗಳ ಪ್ಲಾಸ್ಟರಿಂಗ್‌ ಕಾರ್ಯವನ್ನು ಗುತ್ತಿಗೆದಾರರು ಆರಂಭಿಸಿದ್ದಾರೆ ಎನ್ನಲಾಗಿದೆ.

ADVERTISEMENT

ಇನ್ನೊಂದೆಡೆ ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಿಬ್ಬಂದಿ ಸಭೆ ನಡೆಸಿ ಮುಂದಿನ ಯೋಜನೆಗಳ ಕುರಿತು ಚರ್ಚೆಗಳನ್ನು ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬ್ಯಾಡಗಿ ಎಸ್‌ಜೆಜೆಎಂ ಕೆಪಿಎಸ್‌ ಶಾಲೆಯ ಶಾಲಾಭಿವೃದ್ಧು ಸಮಿತಿಯ ಸಭೆ ಬುಧವಾರ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.