ADVERTISEMENT

ಹಾವೇರಿ | ಶಿಕ್ಷಣವೇ ನಿಜವಾದ ಬೆಳಕು: ಬಿಇಒ ಅಂಬಿಗೇರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 8:33 IST
Last Updated 23 ಫೆಬ್ರುವರಿ 2026, 8:33 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ದೇಸಾಯಿ ಮಠದಲ್ಲಿ ಭಾನುವಾರ ನಡೆದ ಸ್ನೇಹ ಸಮ್ಮಿಲನ ಹಾಗೂ ರನ್ನಮಯ್ಯ ಅಸೋಸಿಯೇಷನ್ ಉದ್ಘಾಟನಾ ಸಮಾರಂಭವನ್ನು ಬಿಇಒ ಎಂ.ಬಿ. ಅಂಬಿಗೇರ ಉದ್ಘಾಟಿಸಿದರು 
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ದೇಸಾಯಿ ಮಠದಲ್ಲಿ ಭಾನುವಾರ ನಡೆದ ಸ್ನೇಹ ಸಮ್ಮಿಲನ ಹಾಗೂ ರನ್ನಮಯ್ಯ ಅಸೋಸಿಯೇಷನ್ ಉದ್ಘಾಟನಾ ಸಮಾರಂಭವನ್ನು ಬಿಇಒ ಎಂ.ಬಿ. ಅಂಬಿಗೇರ ಉದ್ಘಾಟಿಸಿದರು    

ಶಿಗ್ಗಾವಿ: ‘ಮನುಷ್ಯನಲ್ಲಿನ ಅಂದಕಾರ ದೂರ ಮಾಡುವ ಮೂಲಕ ನಿತ್ಯದ ಬದುಕನ್ನು ಗಟ್ಟಿಗೊಳಿಸಲು ಅಕ್ಷರ ಜ್ಞಾನದ ಪಾತ್ರ ಮುಖ್ಯವಾಗಿದೆ. ಹೀಗಾಗಿ ಶಿಕ್ಷಣವೇ ನಿಜವಾದ ಬೆಳಕಾಗಿ ನಿಂತಿದೆ’ ಎಂದು ಬಿಇಒ ಎಂ.ಬಿ. ಅಂಬಿಗೇರ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ದೇಸಾಯಿ ಮಠದಲ್ಲಿ ಭಾನುವಾರ ಎಂಇಎಸ್‌ ಶಾಲೆಯ 1990-91 ಸಾಲಿನ ವಿದ್ಯಾರ್ಥಿಗಳಿಂದ ನಡೆದ ಸ್ನೇಹ ಸಮ್ಮಿಲನ ಹಾಗೂ ರನ್ನಮಯ್ಯ ಅಸೋಸಿಯೇಷನ್ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರನ್ನಮಯ್ಯ ಅಸೋಸಿಯೇಷನ್ ಕಾರ್ಯದರ್ಶಿ ಹನುಮಂತಪ್ಪ ಯು.ವಿ, ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಫ್.ಸಿ. ಕಾಡಪ್ಪಗೌಡ್ರ, ನಿವೃತ್ತ ಮುಖ್ಯ ಶಿಕ್ಷಕ ಬಿ.ಎಲ್. ಗೊಟಗೋಡಿ, ಮಾತನಾಡಿದರು. ದೇಸಾಯಿ ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಲತೇಶ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಕೊಟ್ರೇಶ ಆದವಾನಿಮಠ, ಸುಮಿತ್ರಾ ದಿಡಗೂರ, ಸಿ.ಬಿ. ಸಿರಬಡಗಿ, ಮಧುಮತಿ ನಾಯ್ಕ, ಗೌಡಪ್ಪ ಬನ್ನೆ, ಶೇಖಣ್ಣ ಕಟ್ಟಿಮನಿ, ಗೋವಿಂದ ಕುಲಕರ್ಣಿ, ಮೋದಿನಸಾಬ ದೊಡ್ಡಮನಿ, ಮಂಜುಳಾ ಹಳವಳ್ಳಿ, ರತ್ನಾ ಹುಯಿಲಗೋಳ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.