
ಶಿಗ್ಗಾವಿ: ಮನುಷ್ಯನ ಬದುಕಿನ ಯಶಸ್ವಿಗೆ ಅವರು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮಾಡುವ ಕಾಯಕವೇ ಕಾರಣವಾಗಿದೆ. ಹೀಗಾಗಿ ಮಾಡುವ ಕಾಯಕದಲ್ಲಿ ಮೇಲು,ಕೀಲೆಂಬ ಭಾವನೆ ತಾಳದೆ ಸೇವಾ ಮನೋಭಾವದಿಂದ ನಿರ್ವಹಿಸಿದ ಬದುಕು ಸಾರ್ಥಕವಾಗುತ್ತದೆ ಎಂದು ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖಂಡರಾದ ಹನುಮಂತಪ್ಪ ಬಾರಂಗಿ, ಗೋವಿಂದ ಗೋಣೆಪ್ಪನವರ, ಜಲಾನಿ ಜಂಗಳಿ, ಗೌಸ್ ಅಗಸಿಮಟ್ಟಿ, ಶಿರಸ್ತೆದಾರರಾದ ವಿಶ್ವನಾಥ ತತ್ತಿ, ವಿಲ್ಸನ್, ಐ.ಎಂ.ಪಾಟೀಲ ಸೇರಿದಂತೆ ತಹಶೀಲ್ದಾರ್ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.