
ಶಿಗ್ಗಾವಿ: ‘ಸಮಾಜ ಸುಧಾರಣೆಯಲ್ಲಿ ಮಹಿಳಾ ಪ್ರಾಧಾನ್ಯತೆ ಬಹಳ್ಟು ಮುಂಚೂಣಿಯಲ್ಲಿದ್ದು, ಮಹಿಳಾ ಸಮುದಾಯದಲ್ಲಿ ತಾಯಿ ಮಮಕಾರ, ಪ್ರೀತಿ, ವಾತ್ಸಲ್ಯ ಕಾಣುತ್ತೇವೆ. ಆದ್ದರಿಂದ ಮನುಷ್ಯ ಸಂಬಂಧಗಳು ಗಟ್ಟಿಗೊಳ್ಳಲು ಸಾಧ್ಯವಾಗಿದೆ’ ಎಂದು ಶಿಗ್ಗಾವಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ವಿನೋಧಾ ಪಾಟೀಲ ಹೇಳಿದರು.
ಪಟ್ಟಣದ ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ವಿಶ್ವ ಶಾಂತಿ ಮಹಿಳಾ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
‘ಇಂದಿನ ಕಾಲಘಟ್ಟದಲ್ಲಿ ಜಾತೀಯ ಸಂಘಟನೆಗಳ ಅವಶ್ಯಕತೆ ಎದ್ದು ಕಾಣುತ್ತಿದೆ. ಮಹಿಳೆಯರು ಜಾಗೃತರಾಗಿ ಸರ್ವ ಸಮುದಾಯದ ಮಹಿಳಾ ಸಂಘಗಳ ಮೂಲಕ ಮುಂದೆ ಬಂದಾಗ ಪ್ರಗತಿ ಕಾಣಲು ಸಾಧ್ಯವಿದೆ’ ಎಂದರು.
‘ಮಹಿಳಾ ಸಂಘಗಳು ಮಹಿಳೆಯರ ಸಬಲೀಕರಣ, ಸ್ವಾವಲಂಬನೆ ಮತ್ತು ಆರ್ಥಿಕ ಅಭಿವೃದ್ಧಿಯ ಗುರಿಯೊಂದಿಗೆ ನಡೆಯುತ್ತಿವೆ. ಅಂತೆಯೇ ವಿಶ್ವಶಾಂತಿ ಮಹಿಳಾ ಸಂಘವೂ ಕೌಟುಂಬಿಕ ನಿರ್ವಹಣೆ ಜೊತೆಗೆ ಸದಾ ಮಹಿಳೆಯರ ಶ್ರೇಯೋಭಿವೃದ್ದಿಗೆ ಪೂರಕವಾಗಿ ಯಶಸ್ಸು ಕಾಣಲಿ’ ಎಂದು ಹಾರೈಸಿದರು.
ವಿಶ್ವ ಶಾಂತಿ ಮಹಿಳಾ ಸಂಘದ ಅಧ್ಯಕ್ಷೆ ನೇತ್ರಾವತಿ ಶಿರೋಳ ಮಾತನಾಡಿ, ‘ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು, ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವುದು, ಸಹಕಾರಿ ಚಟುವಟಿಕೆಗಳ ಮೂಲಕ ಅವರ ಸಾಮರ್ಥ್ಯವನ್ನು ಹೆಚ್ಚಿಸುವುದು. ಸಂಘದ ಮುಖ್ಯ ಉದ್ದೇಶವಾಗಿದ್ದು ಸದಸ್ಯರ ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯವಿದೆ’ ಎಂದರು.
ವಿಶ್ವ ಶಾಂತಿ ಮಹಿಳಾ ಸಂಘದ ಕಾರ್ಯದರ್ಶಿ ಚಂದ್ರಕಲಾ ತೆಂಬದಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು,
ಪತ್ರಿ ಬಸವೇಶ್ವರ ದೇವಸ್ಥಾನ ಸಮೀತಿ ಅಧ್ಯಕ್ಷ ಕಾಳಿಂಗಪ್ಪ ಕೋಣಪ್ಪನವರ, ಕಾರ್ಯದರ್ಶಿ ವಿ.ಎಫ್. ಹೊಸಮಣಿ, ಖಜಾಂಚಿ ಲಲಿತಾ ಕುಲಕರ್ಣಿ, ರೇಣುಕಾ ಗುಡ್ಡದಅನ್ವೇರಿ, ಶಕುಂತಲಾ ಪತ್ತಾರ,ಶಕುಂತಲಾ ಪತ್ತಾರ, ಕಾವ್ಯಾ ಬಸರೀಕಟ್ಟಿ, ಶೋಭಾ ಸಂಶಿ ಸೇರಿದಂತೆ ಸಂಘದ ಮಹಿಳಾ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.