ADVERTISEMENT

ಹಾವೇರಿ: ನವದುರ್ಗೆಯರಿಗೆ ವಿಶೇಷ ಅಲಂಕಾರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 16:19 IST
Last Updated 19 ಅಕ್ಟೋಬರ್ 2020, 16:19 IST
ಹಾವೇರಿ ನಗರದ ಹಕ್ಕಲಮರಿಯಮ್ಮ ಮತ್ತು ನವದುರ್ಗಾ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ದೇವಿಯರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ 
ಹಾವೇರಿ ನಗರದ ಹಕ್ಕಲಮರಿಯಮ್ಮ ಮತ್ತು ನವದುರ್ಗಾ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ದೇವಿಯರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ    

ಹಾವೇರಿ:ನಗರದ ರೈಲ್ವೆ ನಿಲ್ದಾಣದ ಹತ್ತಿರದ ಹಕ್ಕಲಮರಿಯಮ್ಮ ಮತ್ತು ನವದುರ್ಗಾ ದೇವಸ್ಥಾನದಲ್ಲಿ ದಸರಾ ಅಂಗವಾಗಿ ನವದುರ್ಗೆಯರಿಗೆ ನಿತ್ಯವೂ ವಿಶೇಷ ಅಲಂಕಾರ ಮಾಡಲಾಗುತ್ತಿದೆ.

ಶೈಲ ಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ದೇವಿಯರಿಗೆ ನವರಾತ್ರಿ ಹಿನ್ನೆಲೆಯಲ್ಲಿ ಪ್ರತಿ ದಿನ ವಿಶೇಷ ಪೂಜೆ ಮಾಡಲಾಗುತ್ತಿದೆ.

ನಿತ್ಯ ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ಕುಂಕುಮಾರ್ಚನೆ, ಅಭಿಷೇಕ, ದೇವಿ ಪಾರಾಯಣ, ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.ದೇವಿಯರ ಆರಾಧನೆ ಜತೆಗೆ ಇಲ್ಲಿರುವ 37 ದೇವರ ವಿಗ್ರಹಗಳಿಗೂ ವಿಶೇಷ ಪೂಜೆ ಸಲ್ಲುತ್ತಿದೆ.

ADVERTISEMENT

‘ಪ್ರತಿ ವರ್ಷ ದಸರಾ ಹಬ್ಬದಲ್ಲಿ ನಿತ್ಯ ಚಂಡಿ ಹೋಮ, ದುರ್ಗಾದೇವಿ ಹೋಮಗಳನ್ನು ನೆರವೇರಿಸಿದ್ದೇವೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಈ ಹೋಮಗಳನ್ನು ರದ್ದುಪಡಿಸಲಾಗಿದೆ. ಸರಳ ಪೂಜೆ ಮತ್ತು ವಿಶೇಷ ಅಲಂಕಾರ ನೋಡಲು ಭಕ್ತರು ಬರುತ್ತಿದ್ದಾರೆ’ ಎಂದು ದೇವಸ್ಥಾನದ ಮುಖ್ಯಸ್ಥ ವಾಮನ ಕೃಷ್ಣರಾವ್ ಕೇಳಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.