ADVERTISEMENT

ಹಾವೇರಿ: ದೇಗುಲಗಳಲ್ಲಿ ವಿಶೇಷ ಪೂಜೆ, ಸಂಭ್ರಮಾಚರಣೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ: ಬಿಜೆಪಿ ಕಾರ್ಯಕರ್ತರಿಂದ ಸಿಹಿ ವಿತರಣೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 13:10 IST
Last Updated 5 ಆಗಸ್ಟ್ 2020, 13:10 IST
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿಪೂಜೆ ನೆರವೇರಿದ ಹಿನ್ನೆಲೆಯಲ್ಲಿ ಹಾವೇರಿಯ ಶ್ರೀರಾಮ ಮಂದಿರದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಬಿಜೆಪಿ ಮುಖಂಡರು ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಶಾಸಕ ನೆಹರು ಓಲೇಕಾರ, ಸಿದ್ದರಾಜ ಕಲಕೋಟಿ ಇದ್ದಾರೆ  
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿಪೂಜೆ ನೆರವೇರಿದ ಹಿನ್ನೆಲೆಯಲ್ಲಿ ಹಾವೇರಿಯ ಶ್ರೀರಾಮ ಮಂದಿರದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಬಿಜೆಪಿ ಮುಖಂಡರು ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಶಾಸಕ ನೆಹರು ಓಲೇಕಾರ, ಸಿದ್ದರಾಜ ಕಲಕೋಟಿ ಇದ್ದಾರೆ     

ಹಾವೇರಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ ನಡೆದವು.

ನಗರದ ಶ್ರೀರಾಮ ಮಂದಿರದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ವಿಶೇಷ ಪೂಜೆ ಮಾಡಿಸಿದರು.ಶಾಸಕ ನೆಹರು ಓಲೇಕಾರ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.ನಂತರ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಗವಾ ದ್ವಜ ಕಟ್ಟಿ ಶ್ರೀರಾಮ ದೇವರ ಪರ ಜೈ ಘೋಷಗಳನ್ನು ಹಾಕಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಮುಳ್ಳೂರ, ಜಿಲ್ಲಾ ಉಪಾಧ್ಯಕ್ಷೆಸೌಭಾಗ್ಯಮ್ಮ ಹಿರೇಮಠ, ಜಿಲ್ಲಾ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ, ಜಿಲ್ಲಾ ವಕ್ತಾರರಾದ ಪ್ರಭು ಹಿಟ್ನಳ್ಳಿ, ಎಸ್.ಆರ್. ಕಾರ್ಯಾಲಯ ಕಾರ್ಯದರ್ಶಿ ರಮೇಶ ಪಾಲನಕರ, ಹೆಗಡೆ, ಹನುಮಂತ ನಾಯಕ ಬದಾಮಿ, ವೇದವಾಸ ಕಟ್ಟಿ, ಮಂಜುಳಾ ಕರಬಸಮ್ಮನವರ ಪಾಲ್ಗೊಂಡಿದ್ದರು.

ADVERTISEMENT

ವಿಶೇಷ ಪೂಜೆ

ಹಾವೇರಿಯ ಶ್ರೀರಾಮ ಮಂದಿರದಲ್ಲಿ ಬಿಜೆಪಿ ಮುಖಂಡ ಹನುಮಂತನಾಯ್ಕ ಬದಾಮಿ ಸೇರಿದಂತೆ ಅನೇಕರು ವಿಶೇಷ ಪೂಜೆ ಸಲ್ಲಿಸಿದರು. ಡಿ.ಡಿ.ಕಳ್ಳಿಹಾಳ, ವಾಸು ರಾಜಪುರೋಹಿತ, ಮಹಾದೇವಗೌಡ ಪಾಟೀಲ, ರಮೇಶ ಕಡಕೋಳ, ಜೆ.ಕೆ.ದೇಸಾಯಿ, ಸುರೇಶ ಗೋಕಾಕ, ಶ್ರೀಮತಿ ಮೈಥಿಲಿ ಬದಾಮಿ ದೀಪಾ ಕಳ್ಳಿಹಾಳ ಹಾಜರಿದ್ದರು.

ವಿಘ್ನ ಬಾರದಿರಲಿ

ರಾಮಮಂದಿರದ ಭೂಮಿಪೂಜೆಗೆ ಯಾವುದೇ ವಿಘ್ನಗಳು ಬಾರದಿರಲಿ ಎಂದು ತಾಲ್ಲೂಕಿನ ಹಾಲಗಿ ಗ್ರಾಮದ ಕಲ್ಮೇಶ್ವರಸ್ವಾಮಿಗೆ ಬುಧವಾರ ಗ್ರಾಮಸ್ಥರು ಪೂಜೆ ಸಲ್ಲಿಸಿದರು.ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.