
ಶಿಗ್ಗಾವಿ: ಧರ್ಮದ ತಳಹದಿಯ ಮೇಲೆ ನಡೆದಾಗ ಮಾತ್ರ ಬದುಕು ಯಶಸ್ವಿಯಾಗಲು ಸಾಧ್ಯ. ಭಕ್ತಿ ಮಾರ್ಗದಲ್ಲಿ ಧರ್ಮ ಪಾಲನೆ ಮಾಡುವುದು ಮುಖ್ಯವಾಗಿದೆ ಎಂದು ಗಂಗೆಭಾವಿ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗಂಗೆಭಾವಿ ಗವಿಮಠದಲ್ಲಿ ಮಕರ ಸಂಕ್ರಮಣದ ಮತ್ತು ಲಿಂಗೈಕ್ಯ ಯೋಗಿರಾಜೇಂದ್ರ ಸ್ವಾಮೀಜಿ ಮತ್ತು ಮೌನ ತಪ್ಪಸ್ವಿ ಗುರುಸಿದ್ದೇಶ್ವರ ಸ್ವಾಮೀಜಿ ಅವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಹಾತ್ಮರ ತಪ್ಪಿಸಿಗೆ ಮೆಚ್ಚಿ ಗಂಗಾದೇವಿಯೇ ಪ್ರತ್ಯಕ್ಷವಾಗುವ ಮೂಲಕ ಗಂಗೇಭಾವಿಗೆ ಹರಿದು ಬಂದು ನೆಲೆಸಿರುವುವ ಪುಣ್ಯ ಕ್ಷೇತ್ರವಿದು. ಇಲ್ಲಿನ ನೆಲವೇ ಪವಿತ್ರ ತಾಣವಾಗಿದೆ ಎಂದರು.
ಗಂಗೆಭಾವಿ ಗವಿಮಠದ ಬಸಯ್ಯ ಸ್ವಾಮೀಜಿ ನೇತೃತ್ವ ವಹಿಸಿ ಅವರು ಮಾತನಾಡಿ, ಗುರುಸಿದ್ದೇಶ್ವರ ಸ್ವಾಮೀಜಿ ಅವರ ತಪ್ಪಿನ ಶಕ್ತಿಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಮೂಡಲು ಸಾಧ್ಯವಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವುದಕ್ಕಾಗಿ ಸ್ವಾಮೀಜಿ ಅವರು ಶ್ರಮಿಸಿದ್ದಾರೆ. ಭಕ್ತ ಆಶೋತ್ತರದಂತೆ ಇಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ ಎಂದರು.
ನಿವೃತ್ತ ಶಿಕ್ಷಕ ಎನ್.ಎಸ್.ಬರದೂರ ಮಾತನಾಡಿದರು. ಮುಖಂಡರಾದ ಚನ್ನಪ್ಪ ಬಿಂದ್ಲಿ, ನಾಗರಾಜ ಸೂರಗೊಂಡ, ಬಸವರಾಜ ಸೂರಗೊಂಡ, ಬಸವರಾಜ ಬಸವನಾಳ, ಗದಿಗೆಪ್ಪ ನಾಗನೂರಮಠ, ಮಲ್ಲಿಕಾಜರ್ುನ ಸೂಗೊಂಡ, ಮಲ್ಲಪ್ಪ ಸುಣಗಾರ,, ಪ್ರಶಾಂತ ಕ್ಯಾಲಗೊಂಡ, ಅಜರ್ುಪ್ಪ ಲಮಾಣಿ, ಕಾಳಪ್ಪ ಬಡಿಗೇರ, ನೀಲಕಂಠಗೌಡ್ರ ಪಾಟೀಲ, ಅಣ್ಣಪ್ಪ ಲಮಾಣಿ, ಪಿಡಿಒ ರಾಜು, ರಾಜು ಡವಗಿ, ಉಮಾ ದೊಡ್ಡಮನಿ, ನಿರ್ಮಲಾ ಗೋರ್ಪಡೆ, ಆಶಾ ಮಂಜಪ್ಪ, ವೀಣಾ ಪೂಜಾರ, ಮಾಲಾ ಹುಡೇದ ಸೇರಿದಂತೆ ಗವಿಸಿದ್ದೇಶ್ವರ ಸೇವಾ ಸಮಿತಿ ಹಾಗೂ ಸದ್ಬಕ್ತ ಮಂಡಳಿ ಪದಾಧಿಕಾರಿಗಳು, ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.
ಇಂದು ಬೆಳಿಗ್ಗೆ ಲಿಂಗೈಕ್ಯ ರಾಜಯೋಗೇಂದ್ರ ಸ್ವಾಮೀಜಿ ಮತ್ತು ಮೌನ ತಪ್ಪಸ್ವಿ ಗುರುಸಿದ್ದೇಶ್ವರ ಗದ್ದುಗೆಗೆ ವಿಶೇಷ ಪೂಜೆ , ಮಹಾರುದ್ರಾಭಿಷೇಕ ಸೇರಿದಂತೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಮತ್ತು ಮಹಿಳೆಯರಿಂದ ರುದ್ರಪಠಣ ಸತ್ಸಂಗ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.