ADVERTISEMENT

ಶಿಗ್ಗಾವಿ | ‘ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 3:18 IST
Last Updated 31 ಡಿಸೆಂಬರ್ 2025, 3:18 IST
ಶಿಗ್ಗಾವಿ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಸೋಮವಾರ ನಡೆದ ವಿಶ್ವಗುರು ಹಳೇ ವಿದ್ಯಾರ್ಥಿಗಳ ಸಂಘದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು 
ಶಿಗ್ಗಾವಿ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಸೋಮವಾರ ನಡೆದ ವಿಶ್ವಗುರು ಹಳೇ ವಿದ್ಯಾರ್ಥಿಗಳ ಸಂಘದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು    

ಶಿಗ್ಗಾವಿ: ‘ಬದುಕಿನ ಸದೃಢತೆಗೆ ಪ್ರಾಯೋಗಿಕ ಜ್ಞಾನ ಅವಶ್ಯ. ನಿರಂತರ ಪರಿಶ್ರಮದಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯ’ ಎಂದು ನಿವೃತ್ತ ಏರೊನಾಟಿಕಲ್‌ ಎಂಜಿನಿಯರ್ ಶಿವರಾಜ ದೇಸಾಯಿ ಹೇಳಿದರು.

ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಸೋಮವಾರ ನಡೆದ ವಿಶ್ವಗುರು ಹಳೇ ವಿದ್ಯಾರ್ಥಿ ಸಂಘದ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಗುರುಗಳು ಹಾಗೂ ಕುಟುಂಬಸ್ಥರ ಮಾರ್ಗದರ್ಶನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ನಿವೃತ್ತ ಶಿಕ್ಷಕ ಕೆ.ಎನ್. ಕೋಡಿಹಳ್ಳಿ ಮಾತನಾಡಿ, ‘ವಿದ್ಯಾರ್ಥಿಗಳ ಪ್ರತಿಭೆ ಪ್ರೋತ್ಸಾಹಿಸುವ ಉದ್ದೇಶದಿಂದ ಕೆಪಿಎಸ್‌ ಶಾಲೆ ಆರಂಭಿಸಲು ವಿದ್ಯಾರ್ಥಿಗಳ ಸಂಘ ಚಿಂತನೆ ಮಾಡಬೇಕು’ ಎಂದು ಸೂಚಿಸಿದರು. 

ADVERTISEMENT

ನಿವೃತ್ತ ಶಿಕ್ಷಕರಾದ ಎನ್.ಆರ್. ಸೋಮನಕಟ್ಟಿ, ಬಸವರಾಜ ದುಂಡಪ್ಪನವರ ಮಾತನಾಡಿದರು. ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ವಿ.ಜಿ. ದುಂಡಪ್ಪನವರ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ಗುರುನಾಥಗೌಡ ಸಣ್ಣಮನಿ, ಮಲ್ಲನಗೌಡ ಭರಮಗೌಡ್ರ, ಸಂಘದ ಪದಾಧಿಕಾರಿಗಳಾದ ವಿ.ಎಸ್. ಭದ್ರಶೆಟ್ಟಿ, ಗದಿಗಯ್ಯ ಕಳಸಗೇರಿಮಠ, ಮಹಾದೇವಪ್ಪ ಕಾಮನಹಳ್ಳಿ, ಅಡಿವೆಪ್ಪ ದೊಡ್ಡಮನಿ, ಅಶೋಕ ಬೆಂಗೇರಿ, ಮಹಾದೇವಪ್ಪ ತಳವಾರ, ಉಳವಪ್ಪ ಅಮಾತೆಣ್ಣನವರ, ಬಸವರಾಜ ಹುಲಗೂರ, ಎಸ್‌ಡಿಎಂಸಿ ಅಧ್ಯಕ್ಷ ಸೋಮಣ್ಣ ಸಕ್ರಿ, ಮುಖ್ಯ ಶಿಕ್ಷಕಿ ಎ. ಮೀರಾಬಾಯಿ, ಮುಖ್ಯ ಶಿಕ್ಷಕ ಈಶ್ವರ ಕಾಲವಾಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.