ADVERTISEMENT

ರಾಷ್ಟ್ರದ ಉನ್ನತಿಗೆ ಶಿಕ್ಷಕನ ಪಾತ್ರ ಅಮೂಲ್ಯ: ಅರಕೆರೆ ಸಿದ್ದಲಿಂಗ ಶ್ರೀ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:06 IST
Last Updated 11 ಜುಲೈ 2025, 4:06 IST
ರಾಣೆಬೆನ್ನೂರಿನ ಗುರುಕೊಟ್ಟೂರೇಶ್ವರ ಮಠದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ನಡೆದ ಅರಕೆರೆ ಸಿದ್ದಲಿಂಗ ಶಿವಯೋಗಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮತ್ತು ಬೆಳಗಾವಿ ಕಾರಂಜಿಮಠದ ಶಿವಯೋಗಿ ದೇವರ ಪಾದ ಪೂಜೆ ನಡೆಯಿತು 
ರಾಣೆಬೆನ್ನೂರಿನ ಗುರುಕೊಟ್ಟೂರೇಶ್ವರ ಮಠದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ನಡೆದ ಅರಕೆರೆ ಸಿದ್ದಲಿಂಗ ಶಿವಯೋಗಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮತ್ತು ಬೆಳಗಾವಿ ಕಾರಂಜಿಮಠದ ಶಿವಯೋಗಿ ದೇವರ ಪಾದ ಪೂಜೆ ನಡೆಯಿತು    

ರಾಣೆಬೆನ್ನೂರು: ‘ದಿವ್ಯ ಶಕ್ತಿ ಹೊಂದಿರುವ ದೇವರು ಪ್ರಪಂಚದ ಸೃಷ್ಟಿಕರ್ತನಾದರೆ, ಜ್ಞಾನ ಹೊಂದಿರುವ ಶಿಕ್ಷಕನು  ರಾಷ್ಟ್ರದ ಸೃಷ್ಟಿಕರ್ತನಾಗಿ ಪ್ರಗತಿಗೆ ದಾರಿದೀಪವಾಗುತ್ತಾನೆ’ ಎಂದು ಅರಕೆರೆ ಸಿದ್ದಲಿಂಗ ಶಿವಯೋಗಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಗುರು ಕೊಟ್ಟೂರೇಶ್ವರ ಮಠದಲ್ಲಿ ಏರ್ಪಡಿಸಿದ್ದ ಅರಕೆರೆ ಸಿದ್ದಲಿಂಗ ಶಿವಯೋಗಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ತುಲಾಭಾರ, ಪಾದಪೂಜೆ, ಅಂಬಾರಿ ಮಹೋತ್ಸವ, ರಕ್ತದಾನ ಶಿಬಿರ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬೆಳಗಾವಿ ಕಾರಂಜಿಮಠದ ಶಿವಯೋಗಿ ದೇವರು, ಶಿಗ್ಗಾವಿ ಸಂಗನಬಸವ ಸ್ವಾಮೀಜಿ, ಗುಡ್ಡದ ಆನ್ವೇರಿಯ ಶಿವಯೋಗಿ ಸ್ವಾಮೀಜಿ ಹಾಗೂ ಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶಿವಯೋಗಿ ದೇವರು ನಡೆಸಿಕೊಟ್ಟ ಮೂರು ದಿನಗಳ ಕಾಲದ ಬಸವಾದಿ ಶರಣರ ಪ್ರವಚನ ಸಂಪನ್ನಗೊಂಡಿತು. ನಂತರ ಶ್ರೀಗಳ ತುಲಾಭಾರ ಮತ್ತು ಪಾದಪೂಜೆ ನೆರವೇರಿತು.

ADVERTISEMENT

ಕಲಾವಿದರಾದ ಆನಂದ ಪಾಟೀಲ ಮತ್ತು ಮಹಾಂತೇಶಸ್ವಾಮಿ ಚಿಕ್ಕಮಠ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬೆಳಿಗ್ಗೆ ಗುರುಕೊಟ್ಟೂರೇಶ್ವರ, ದಾನಮ್ಮದೇವಿ ಮೂರ್ತಿಗೆ ವಿಶೇಷ ಪೂಜೆ ನಡೆಯಿತು. ರಕ್ತದಾನ ಶಿಬಿರದಲ್ಲಿ 22 ಯುವಕರು ರಕ್ತದಾನ ಮಾಡಿದರು.

ಗದಗ ಮಾಜಿ ಶಾಸಕ ಡಿ.ಆರ್. ಪಾಟೀಲ, ಏಕನಾಥ ಬಾನುವಳ್ಳಿ, ವಿಶ್ವಾರಾಧ್ಯಸ್ವಾಮಿ ಅಜ್ಜೋಡಿಮಠ, ಮಹೇಶ ಶೆಟ್ಟರ, ಸತೀಶ ಅಜ್ಜೋಡಿಮಠ, ಗಿರೀಶ ಮಾಗನೂರ, ಶಾಂತಯ್ಯ ಕೊಟ್ನಿಕಲ್ಮಠ ಶಾಸ್ತ್ರೀಗಳು, ಸರೋಜಾ ಅಜ್ಜೋಡಿ ಮಠ, ಬಸವರಾಜ ಹುಚ್ಚಗೊಂಡರ, ಸತೀಶ ಅಜ್ಜೇವಡಿಮಠ, ಹಂಸಾಗರ, ರಾಮಚಂದ್ರಪ್ಪ ರಮಾಳದ, ಅರವಿಂದ ಅಜ್ಜೇವಡಿಮಠ, ಪರಮೇಶ ಯಡಿಯಾಪುರ, ಪ್ರಭು ಹಂಸಸಾಗರ, ವಿಶ್ವನಾಥ ಕೋಡದ, ಜಗದೀಶ ಕಳ್ಯಾಳ, ಜಾಹ್ನವಿ ಉಪ್ಪಿನ, ಚನ್ನಯ್ಯ, ರಾಜು ಗರಗ, ಶಶಿಧರ ಇದ್ದರು.

ರಾಣೆಬೆನ್ನೂರಿನಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುವಾರ ಅರಕೆರೆ ಸಿದ್ದಲಿಂಗ ಶಿವಯೋಗಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅವರ ಆನೆ ಅಂಬಾರಿ ಉತ್ಸವ ವಿಜೃಂಣೆಯಿಂದ ನೆರವೇರಿತು  

ಅಂಬಾರಿ ಉತ್ಸವ:

ಬೆಳಿಗ್ಗೆ ಅರಕೆರೆ ಸಿದ್ಧಲಿಂಗ ಸ್ವಾಮೀಜಿ ಅವರ ಅಂಬಾರಿ ಉತ್ಸವ ವಿಜೃಂಭಣೆಯಿಂದ ಸಾಗಿತು. ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಶ್ರೀಗಳ ಅಂಬಾರಿ ಉತ್ಸವವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರು ಕೊಟ್ಟೂರೇಶ್ವರ ಮಠಕ್ಕೆ ತಲುಪಿತು. ನೂರಾರು ಮಹಿಳೆಯರು ಕುಂಭ ಹೊತ್ತು ಸಾಗಿದರು. ಮೆರವಣಿಗೆಯು ನಗರದ ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನದಿಂದ ಹೊರಟು ಅಂತಿಮವಾಗಿ ಶ್ರೀಮಠಕ್ಕೆ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.