ADVERTISEMENT

ಹೋರಿ ಬೆದರಿಸುವ ಸ್ಪರ್ಧೆ | ನಾಲ್ವರು ಸಾವು: ಹಾವೇರಿ ಜಿಲ್ಲೆಯಲ್ಲಿ ದುರ್ಘಟನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 6:00 IST
Last Updated 23 ಅಕ್ಟೋಬರ್ 2025, 6:00 IST
<div class="paragraphs"><p>ಹಾವೇರಿ ವೀರಭದ್ರೇಶ್ವರ ದೇವಸ್ಥಾನದ ಎದುರು ನಡೆದ ಹೋರಿ ಬೆದರಿಸುವ ಸ್ಪರ್ಧೆ</p></div>

ಹಾವೇರಿ ವೀರಭದ್ರೇಶ್ವರ ದೇವಸ್ಥಾನದ ಎದುರು ನಡೆದ ಹೋರಿ ಬೆದರಿಸುವ ಸ್ಪರ್ಧೆ

   

ಹಾವೇರಿ: ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ಬುಧವಾರ ನಡೆದ ‘ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ’ ಹಾಗೂ ‘ಹೋರಿಗಳ ಮೆರವಣಿಗೆ’ ವೇಳೆ ಹೋರಿಗಳು ಗುದ್ದಿ ನಾಲ್ವರು ಮೃತಪಟ್ಟಿದ್ದಾರೆ.

ಹಾವೇರಿಯ ದಾನೇಶ್ವರಿನಗರದ ಚಂದ್ರಶೇಖರ ಕೋಡಿಹಳ್ಳಿ (75), ಹಾವೇರಿ ತಾಲ್ಲೂಕಿನ ದೇವಿಹೊಸೂರಿನ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ (75), ಹಾನಗಲ್ ತಾಲ್ಲೂಕಿನ ತಿಳವಳ್ಳಿಯ ಭರತ್ ರಾಮಪ್ಪ ಹಿಂಗಮೇರಿ (24), ಯಳವಟ್ಟಿ ಗ್ರಾಮದ ಶ್ರೀಕಾಂತ ಗುರುಶಾಂತಪ್ಪ ಕೋಣನಕೇರಿ (40) ಮೃತರು.

ADVERTISEMENT

‘ಹೆಸ್ಕಾಂನ ನಿವೃತ್ತ ಲೈನ್‌ಮನ್ ಚಂದ್ರಶೇಖರ್ ಅವರಿಗೆ ಹಾವೇರಿಯ ಹಳೆಯ ಪಿ.ಬಿ. ರಸ್ತೆಯ ಬಳಿ ಹೋರಿ ಗುದ್ದಿತು. ದೇವಿಹೊಸೂರಿನ  ಹೊಂಡದ ಓಣಿಯಲ್ಲಿರುವ ಮನೆಯ ಕಟ್ಟೇ ಮೇಲೆ ಕೂತಿದ್ದ ಘನಿಸಾಬ ಅವರ ಕುತ್ತಿಗೆ ಮತ್ತು ಎದೆಗೆ ಹೋರಿ ತಿವಿಯಿತು. ತಿಳವಳ್ಳಿ ಗ್ರಾಮದ ಮುಖ್ಯ ರಸ್ತೆಯ ಗೇಟ್ ಬಳಿ ನಿಂತಿದ್ದ ವೇಳೆ ಭರತ್ ಅವರಿಗೆ ಹೋರಿ ಗುದ್ದಿತ್ತು. ಯಳವಟ್ಟಿ ಗ್ರಾಮದಲ್ಲಿಯೂ ಹೋರಿ ಗುದ್ದಿದ್ದರಿಂದ ಶ್ರೀಕಾಂತ್ ಅವರ ಎದೆ ಹಾಗೂ ತಲೆಗೆ ಪೆಟ್ಟಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಹಾವೇರಿ ನಗರ, ಗ್ರಾಮೀಣ, ಆಡೂರು ಹಾಗೂ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.