ADVERTISEMENT

ಕಾಯ ಮಾಗಿದರೂ ಕಾಯಕ ಬಿಡದ ತಪಸ್ವಿ: ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 15:54 IST
Last Updated 22 ನವೆಂಬರ್ 2021, 15:54 IST
ಹಾಲಕೆರೆ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಅಭಿನವ ಅನ್ನದಾನ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಹಾವೇರಿಯ ಹುಕ್ಕೇರಿಮಠದಲ್ಲಿ ಸೋಮವಾರ ಭಕ್ತರು ಶ್ರದ್ಧಾಂಜಲಿ ಸಲ್ಲಿಸಿದರು 
ಹಾಲಕೆರೆ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಅಭಿನವ ಅನ್ನದಾನ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಹಾವೇರಿಯ ಹುಕ್ಕೇರಿಮಠದಲ್ಲಿ ಸೋಮವಾರ ಭಕ್ತರು ಶ್ರದ್ಧಾಂಜಲಿ ಸಲ್ಲಿಸಿದರು    

ಹಾವೇರಿ: ಗದಗ ಜಿಲ್ಲೆಯ ನರೇಗಲ್ ಹೋಬಳಿಯ ಹಾಲಕೆರೆ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಅಭಿನವ ಅನ್ನದಾನ ಸ್ವಾಮೀಜಿ (ಸಂಗನ ಬಸವ ಸ್ವಾಮೀಜಿ)ಯವರಿಗೂ ಮತ್ತು ಹಾವೇರಿಯ ಹುಕ್ಕೇರಿಮಠಕ್ಕೂ ಅವಿನಾಭಾವ ಸಂಬಂಧವಿತ್ತು. ಕುಮಾರೇಶನಲ್ಲಿ ಲೀನವಾದಪೂಜ್ಯರಿಗೆ ಶ್ರೀಮಠದ ವತಿಯಿಂದ ಭಾವಪೂರ್ಣ ನಮನ ಸಲ್ಲಿಸುತ್ತೇವೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ತಿಳಿಸಿದ್ದಾರೆ.

ಹುಕ್ಕೇರಿಮಠದಲ್ಲಿ ಸೋಮವಾರ ಡಾ.ಅಭಿನವ ಅನ್ನದಾನ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹಂಪಿ-ಹೊಸಪೇಟೆ ಹೇಮಕೂಟ ಸಿಂಹಾಸನಾಧೀಶ್ವರರು, ಹಾನಗಲ್ಲ ಕುಮಾರೇಶ್ವರರ ಶಿಷ್ಯಶ್ರೇಷ್ಠರು, ಕುಮಾರೇಶ್ವರರ ನಾಮಸ್ಮರಣೆಯಿಂದ ಸೂರ್ಯೋದಯಗೊಂಡರೆ ಶಿವಯೋಗ ಮಂದಿರದ ಪ್ರತಿ ವಟುಸಾಧಕರಲ್ಲಿಯೂ ಕುಮಾರೇಶನನ್ನು ಕಾಣುವ ಶಿವಯೋಗಿ ಪುಂಗವರು, ಕಾಯ ಮಾಗಿದರೂ ಕಾಯಕ ಬಿಡದ ಕಾಯಕಯೋಗಿ, ಮಂದಿರದ ಸಕಲ ಅಭ್ಯುದಯಕ್ಕೂ ಪರಮಪೂಜ್ಯರೇ ಕಾರಣಕರ್ತರೆಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಏಷ್ಯಾದ ಅತೀ ಎತ್ತರದ ರಥ ನಿರ್ಮಿಸಿದ್ದು ಅವರ ಕ್ರಿಯಾಶೀಲ, ಚಿಂತನಾಶೀಲ ಕಾರ್ಯವೈಖರಿಯ ಕೈಗನ್ನಡಿ. ಅಭೂತಪೂರ್ವವಾಗಿ ಮಂದಿರದ ಶತಮಾನೋತ್ಸವ ಆಯೋಜಿಸಿ ಸಂಘಟಿಸಿದ ಮಹಾನುಭಾವರು. ಮುಗಿಲೆತ್ತರದ ರಥಕ್ಕೆ ಹುಕ್ಕೇರಿಮಠದ ಶಿವಬಸವ-ಶಿವಲಿಂಗೇಶ್ವರರ ಭಾವಚಿತ್ರ ಇರುವಂತೆ ಸೂಚಿಸಿ ಹುಕ್ಕೇರಿಮಠದ ಗುರುದ್ವಯರನ್ನು ಕುಮಾರೇಶನಲ್ಲಿರಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ನಮಗೆ ಶಿವಯೋಗ ಮಂದಿರದ ಉಪಾಧ್ಯಕ್ಷ ಸ್ಥಾನ ನೀಡಿ ಗೌರವಿಸಿದ್ದರು ಎಂದು ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.