
ಶಿಗ್ಗಾವಿ: ಸಾಲುಮರದ ತಿಮ್ಮಕ್ಕ ಸೇವೆ ಸ್ಮರಣೆ ಜತೆಗೆ ಪರಿಸರ ಸಂರಕ್ಷಣೆಗೆ ನಮ್ಮ ಕೊಡುಗೆ ನೀಡಲು ಮುಂದಾಗಬೇಕು ಎಂದು ಶಿಕ್ಷಕ ಬಸವರಾಜ ಬಸರಿಕಟ್ಟಿ ಹೇಳಿದರು.
ಪಟ್ಟಣದ ಶಬರಿಗಿರಿಯ ವೈಷ್ಣವಿ ಉದ್ಯಾನದಲ್ಲಿ ಭಾನುವಾರ ಸಾಲು ಮರದ ತಿಮ್ಮಕ್ಕ ಅವರ ಹೆಸರಲ್ಲಿ ಗಿಡ ನೆಡುವ ಮೂಲಕ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಿಮ್ಮಕ್ಕ ಅವರ ನಾಡಿಗೆ ನೀಡಿದ ಸೇವೆ ನಿಸ್ವಾರ್ಥ ಸೇವೆಯಾಗಿದ್ದು, ಇತರರಿಗೆ ಮಾದರಿಯಾಗಿದೆ ಎಂದರು.
ಸಾಲುಮರದ ತಿಮ್ಮಕ್ಕ ಅವರು ತಮ್ಮ ಸೇವೆ ಮೂಲಕ ಯುವ ಜನತೆಗೆ ಪರಿಸರ ಸಂಸರಕ್ಷಣೆಯ ಮಹತ್ವ ತಿಳಿಸುವ ಮೂಲಕ ಅಜರಾಮರರಾಗಿದ್ದಾರೆ. ಅಲ್ಲದೇ ಅವರು ನಾವು ನೆಡುವ ಸಸಿಗಳನ್ನು ತಾಳ್ಮೆ ಮತ್ತು ಪ್ರೀತಿಯಿಂದ ಬೆಳೆಸಿ ಪರಿಸರ ಶುದ್ದೀಕರಿಸಲು ಮುಂದಾ ಗಬೇಕು ಎಂದರು.
ಪರಿಸರ ಉಳಿದರೆ ಮಾತ್ರ ಜೀವ ಸಂಕುಲ ಉಳಿಯಲು ಸಾಧ್ಯ ಎಂಬ ಇಡೀ ಮನುಕುಲಕ್ಕೆ ಪಾಠ ಕಲಿಸಿದ್ದಾರೆ. ಇಂದಿನ ಯುವಕರು ಇಂತಹವರನ್ನು ಆದರ್ಶ ವ್ಯಕ್ತಿಗಳನ್ನಾಗಿಸಿಕೊಂಡು ಪೂಜಿಸಬೇಕು ಎಂದರು.
ಮುಖಂಡರಾದ ವೈ. ಎಸ್. ಪಾಟೀಲ, ಮಲ್ಲಪ್ಪ ಚಕ್ರಸಾಲಿ, ಚನ್ನಪ್ಪ ನೆಲೂಗಲ್ಲ, ಶಿವಲಿಂಗಪ್ಪ ಹುರಳಿ, ರಾಜ್ ಡಾನ್ಸ್ ಶಾಲೆ ಸೇರಿದಂತೆ ವಿವಿಧ ಶಾಲೆ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.