ADVERTISEMENT

ಶಿಗ್ಗಾವಿ: ಹೋತನಹಳ್ಳಿ ಕೃಷಿ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:06 IST
Last Updated 12 ಫೆಬ್ರುವರಿ 2026, 6:06 IST
ಶಿಗ್ಗಾವಿ ತಾಲ್ಲೂಕಿನ ಹೋತನಹಳ್ಳಿ ಗ್ರಾಮದ ವ್ಯವಸಾಯ ಸೇವಾ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಸದಸ್ಯರನ್ನು ಬುಧವಾರ ಸನ್ಮಾನಿಸಲಾಯಿತು 
ಶಿಗ್ಗಾವಿ ತಾಲ್ಲೂಕಿನ ಹೋತನಹಳ್ಳಿ ಗ್ರಾಮದ ವ್ಯವಸಾಯ ಸೇವಾ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಸದಸ್ಯರನ್ನು ಬುಧವಾರ ಸನ್ಮಾನಿಸಲಾಯಿತು    

ಶಿಗ್ಗಾವಿ: ತಾಲ್ಲೂಕಿನ ಹೋತನಹಳ್ಳಿ ಗ್ರಾಮದ ವ್ಯವಸಾಯ ಸೇವಾ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ನಿಂಗಪ್ಪ ಕೊಡಶೆಟ್ಟರ, ಉಪಾಧ್ಯಕ್ಷ ವೀರಭದ್ರಪ್ಪ ಬೈಲವಾಳ ಹಾಗೂ ಸದಸ್ಯರನ್ನು ಗ್ರಾಮಸ್ಥರು ಬುಧವಾರ ಸನ್ಮಾನಿಸಿದರು. 

ಸದಸ್ಯರಾಗಿ ಚಂದ್ರು ಮೇಟಿಮನೆ, ನಿಂಗನಗೌಡ ಪಾಟೀಲ, ಚಂದ್ರು ಬೆಳವತ್ತಿ, ಶಿದ್ದಪ್ಪ ಗೊಳಣ್ಣವರ, ನೂರ್‌ಹ್ಮದ ದ್ಯಾಮಕೊಪ್ಪ, ಮಲ್ಲಪ್ಪ ಗುಳೇದ, ಫಕ್ಕೀರಪ್ಪ ವಡ್ಡರ, ಈರಮ್ಮ ಮೂಡೂರ, ಪಾರಮ್ಮಾ ಸೊಪಿನ ಅವಿರೋಧವಾಗಿ ಆಯ್ಕೆಯಾದರು.

ಕಾಂಗ್ರೆಸ್ ಮುಖಂಡ ಎಂ.ಎಂ. ಪಠಾಣ ಮಾತನಾಡಿ, ‘ಗ್ರಾಮಸ್ಥರು ಒಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಆಯ್ಕೆಯಾದವರು ಕೃಷಿಕರಿಗೆ ನೆರವಾಗುವ ಕಾರ್ಯಗಳನ್ನು ಜಾರಿಗೆ ತರಬೇಕು. ಕೃಷಿ ಪತ್ತಿನ ಸಹಕಾರಿ ಸಂಘ ಕೃಷಿಕರಿಗೆ ಅನುಕೂಲವಾಗಬೇಕು’ ಎಂದರು.

ADVERTISEMENT

ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಗುಡ್ಡಪ್ಪ ಜಲದಿ, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಬಸಪ್ಪ ಸವಣೂರ, ಯುನಿಫ್ ಕಲ್ಯಾಣ, ಗಂಗಾಧರ ಭಂಗಿ, ರುದ್ರಪ್ಪ ಭಂಗಿ, ಶಂಭಣ್ಣ ಅಕ್ಕಿ, ಬಸನಗೌಡ ಕೇಮನಕೇರಿ, ಗುಡ್ಡಪ್ಪ ಬಳ್ಳಾರಿ, ಶಿವಾನಂದ ಸೂರದ, ನಾಗಪ್ಪ ಪರಸಣ್ಣವರ, ಪರಶುರಾಮ ಲಿಂಗದಹಳ್ಳಿ, ಧರ್ಮಣ್ಣ ಭಂಗಿ, ಖಾಜಾಮುದಿನ್ ದ್ಯಾಮನಕೊಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.