ADVERTISEMENT

ರಾಣೆಬೆನ್ನೂರು| ಕಾಡು ಪ್ರಾಣಿ ದಾಳಿ: 11 ಕುರಿಗಳ ಸಾವು

​ಪ್ರಜಾವಾಣಿ ವಾರ್ತೆ
Published 20 ಮೇ 2022, 16:28 IST
Last Updated 20 ಮೇ 2022, 16:28 IST
ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಕಾಡುಪ್ರಾಣಿ ದಾಳಿಗೆ ಮೃತಪಟ್ಟ ಕುರಿಗಳು
ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಕಾಡುಪ್ರಾಣಿ ದಾಳಿಗೆ ಮೃತಪಟ್ಟ ಕುರಿಗಳು   

ರಾಣೆಬೆನ್ನೂರು: ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಗುರುವಾರ ತಡರಾತ್ರಿ ಫಕ್ಕೀರಪ್ಪ ಭರಮಪ್ಪ ಮಾಳನಾಯಕನಹಳ್ಳಿ ಅವರಿಗೆ ಸೇರಿದ ಕುರಿ ದೊಡ್ಡಿಗೆ ಕಾಡು ಪ್ರಾಣಿ ದಾಳಿ ನಡೆಸಿ 11 ಕುರಿಗಳು ಸಾವನ್ನಪ್ಪಿದ್ದು, 7 ಕುರಿಗಳು ತೀವ್ರ ಗಾಯಗೊಂಡಿವೆ.

ಪಶುಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಪರಮೇಶ ಹುಬ್ಬಳ್ಳಿ ಹಾಗೂ ವೈದ್ಯರ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದರು. ಇದು ಚಿರತೆ ದಾಳಿಯಿಂದ ಆಗಿದ್ದಲ್ಲ. ಬೇರೆ ಕಾಡು ಪ್ರಾಣಿ ದಾಳಿ ನಡೆಸಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು. ಹಿಂದೆ ಮೇಡ್ಲೇರಿ ಭಾಗದಲ್ಲಿಯೂ ಇಂತಹ ಘಟನೆ ನಡೆದಿತ್ತು.

ಪಿಡಿಒ ಚೌಡಪ್ಪ, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಬಿಳಸನೂರಮಠ, ಮಂಜಪ್ಪ ಪುಟ್ಟಕ್ಕಳವರ, ರಾಜಶೇಖರ ಗಂಗನಗೌಡ್ರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.