ADVERTISEMENT

ಶಿಗ್ಗಾವಿ |ಆರ್ಥಿಕ ಮಟ್ಟ ಹೆಚ್ಚಳಕ್ಕೆ ಮಹಿಳಾ ಶ್ರಮ ಅಪಾರ: ಕೀರ್ತನಾ ಎನ್

ಬೆಂಗಳೂರು ಆರಿ ವರ್ಕ್ಸ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಕೀರ್ತನಾ ಎನ್. ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 2:33 IST
Last Updated 29 ಆಗಸ್ಟ್ 2025, 2:33 IST
   

ಶಿಗ್ಗಾವಿ: ಮಹಿಳೆಯರು ಇಂದು ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಆರ್ಥಿಕ ಮಟ್ಟ ಹೆಚ್ಚಿಸಲು ಬೆನ್ನೆಲುಬಾಗಿ ನಿಂತಿದ್ದಾರೆ. ಅದರಿಂದಾಗಿ ಇಡೀ ದೇಶವೇ ಆರ್ಥಿಕವಾಗಿ ಬೆಳವಣಿಗೆಯಾಗಲು ಸಾಧ್ಯವಾಗಿದೆ ಎಂದು ಬೆಂಗಳೂರು ಆರಿ ವರ್ಕ್ಸ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಕೀರ್ತನಾ ಎನ್. ಹೇಳಿದರು.

ಪಟ್ಟಣದ ಅಂಬೇಡ್ಕರ್ ಸಂಕೀರ್ಣದಲ್ಲಿ ಭಾನುವಾರ ನಡೆದ ಪೃಥ್ವಿ ಆರಿ ವರ್ಕ್‌ ವತಿಯಿಂದ ಆರಿ ಕಾರ್ಮಿಕರ ಜಿಲ್ಲಾ ಮಟ್ಟದ ಸಮ್ಮೇಳನ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಿಳಾ ಸಮೂಹ ಪ್ರಬಲವಾಗಿ ಬೆಳೆಯಬೇಕು. ತಮ್ಮ ಕುಟುಂಬ ನಿರ್ವಹಣೆ ಸಾಮರ್ಥ್ಯ ಪಡೆಯಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕು ಎಂದು ಉದ್ದೆಶದಿಂದ ಈ ಆರಿ ಕಾರ್ಮಿಕರ ಸಂಘಟನೆಯನ್ನು ಕಟ್ಟಲಾಗಿದೆ. ಅದರ ಮೂಲಕ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವುದು ಮತ್ತು ಮಾರುಕಟ್ಟೆ ಕುರಿತು ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿದೆ’ ಎಂದರು.

ADVERTISEMENT

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡ್ರ ಮಾತನಾಡಿ, ‘ಆರಿ ವರ್ಕ್‌ನಿಂದ ಮಹಿಳೆಯರು ಆರ್ಥಿಕವಾಗಿ ಬೆಳವಣಿಗೆಯ ಜತೆಗೆ ಭಾರತೀಯ ಮೂಲ ಸಂಸ್ಕೃತಿಯ ಶ್ರೀಮಂತಿಕೆಗೆ ಕಾರಣರಾಗಿದ್ದಾರೆ. ಕೌದಿ ವಿನ್ಯಾಸ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಈಗ ವಿನ್ಯಾಸ ಮಾಡುವ ಕಲೆಗೆ ಹೆಚ್ಚಿನ ಬೇಡಿಕೆಯಿದ್ದು, ಇದರಿಂದ ತಾನು ಉದ್ಯೋಗಿ ಆಗುವ ಜತೆಗೆ ಇತರರಿಗೂ ಉದ್ಯೋಗ ಕಲ್ಪಿಸುವ ಕಾರ್ಯ ಆಗುತ್ತಿದೆ’ ಎಂದರು.

ಗ್ಯಾರಂಟಿ ಯೋಜನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶೇಖಣ್ಣ ಮಣಕಟ್ಟಿ ಮಾತನಾಡಿ, ‘ಸರ್ಕಾರ ಗ್ಯಾರಂಟಿ ಯೋಜನೆ ತರುವ ಮೂಲಕ ಮಹಿಳಾ ಸಮೂಹದ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ. ಹೀಗಾಗಿ ಮಹಿಳೆಯರಿಗೆ ಮೀಸಲಾತಿ ಹೆಚ್ಚಿಸುವ ಜತೆಗೆ ಉನ್ನತ ಹುದ್ದೆ ನೀಡುತ್ತಿದೆ’ ಎಂದರು.

ಶಿವಾನಂದ ಮ್ಯಾಗೇರಿ ಮಾತನಾಡಿ, ‘ಮಹಿಳಾ ಕಲ್ಯಾಣಕ್ಕಾಗಿ ವಿವಿಧ ಹೊಸ ಯೋಜನೆಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಅವುಗಳ ಪ್ರಯೋಜನ ಪಡೆಯಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಶಿವರಾಜ ಸಜ್ಜನ ಮಾತನಾಡಿದರು. ಆರಿ ವರ್ಕ್‌ನಲ್ಲಿಯ ಪ್ರತಿಭಾವಂತರನ್ನು ಸನ್ಮಾನಿಸಿ,  ಪ್ರಶಸ್ತಿಗಳನ್ನು ವಿತರಿಸಿದರು.

ಆರಿ ವರ್ಕ್ಸ್ ಕೌನ್ಸಿಲ್ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀ ಜಿ. ಕಾಡಪ್ಪನವರ, ಕಾಂಗ್ರೆಸ್ ಮಹಿಳಾ ತಾಲ್ಲೂಕು ಘಟಕದ ಅಧ್ಯಕ್ಷೆ ಮಲ್ಲಮ್ಮ ಸೋಮನಕಟ್ಟಿ, ಸಾವಯವ ಕೃಷಿ ಸಲಹೆಗಾರ ರವಿಕುಮಾರ ಪಾಟೀಲ, ಪುಟ್ಟರಾಜ ಗವಾಯಿಗಳ ಬ್ಯಾಂಕ್ ಅಧ್ಯಕ್ಷ ಹನುಮಂತಪ್ಪ ವಡ್ಡರ, ಮಮತಾ ಜಾಧವ, ಫಕ್ಕೀರೇಶ ಗುಳೇದ ಸೇರಿದಂತೆ ತಾಲ್ಲೂಕಿನ ಎಲ್ಲ ಮಹಿಳಾ ಹಾಗೂ ಪುರುಷ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಪೃಥ್ವಿ ಆರಿ ವರ್ಕ್‌ ಸಂಘಟನೆಯ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.