ADVERTISEMENT

ಜೀವನ ವಿಧಾನವೇ ಯೋಗ: ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 11:22 IST
Last Updated 21 ಜೂನ್ 2020, 11:22 IST
ಹಾವೇರಿಯ ಬಸವಕೇಂದ್ರ ಹೊಸಮಠ ಹಾಗೂ ಪತಂಜಲಿ ಯೋಗ ಕ್ಲಾಸ್ ಆಶ್ರಯದಲ್ಲಿ ಭಾನುವಾರ ನಗರದ ಹೊಸಮಠದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು
ಹಾವೇರಿಯ ಬಸವಕೇಂದ್ರ ಹೊಸಮಠ ಹಾಗೂ ಪತಂಜಲಿ ಯೋಗ ಕ್ಲಾಸ್ ಆಶ್ರಯದಲ್ಲಿ ಭಾನುವಾರ ನಗರದ ಹೊಸಮಠದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು   

ಹಾವೇರಿ:ಬಸವಕೇಂದ್ರ ಹೊಸಮಠ ಹಾಗೂ ಪತಂಜಲಿ ಯೋಗ ಕ್ಲಾಸ್ ಆಶ್ರಯದಲ್ಲಿಭಾನುವಾರ ನಗರದ ಹೊಸಮಠದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು.

‘ಯೋಗಾಸನವು ಮನುಷ್ಯನ ಶರೀರದ ರಚನಾ ಶಾಸ್ತ್ರದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಸಾವಿರಾರು ವರ್ಷಗಳಿಂದ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ ಯೋಗ ವಿದ್ಯೆಯು ಋಷಿಮುನಿಗಳ ಸಾಧಕರಿಂದ ದೊರೆತ ಜೀವನ ಶೈಲಿಯಾಗಿ ಹರಿದುಬಂದಿದೆ’ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ನುಡಿದರು.

ಯೋಗ ಶಿಕ್ಷಕ ಗುರುಶಾಂತಪ್ಪ ಕೋರಿಶೆಟ್ಟಿ ಯೋಗ ನಡೆಸಿಕೊಟ್ಟರು. ಹಲವಾರು ಮಂದಿ ಅಂತರ ಕಾಯ್ದುಕೊಂಡು ಯೋಗಾಭ್ಯಾಸ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.