ADVERTISEMENT

ಶಾಸಕ ಪಾಟೀಲ ಸಹೋದರರಿಗೆ ಬೆಳ್ಳಿ ಕಿರೀಟ...

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 5:09 IST
Last Updated 18 ಜೂನ್ 2018, 5:09 IST

ಅಫಜಲಪುರ: ಶಾಸಕ ಎಂ.ವೈ.ಪಾಟೀಲ  ಹಾಗೂ ಅವರ ಸಹೋದರ ಎಸ್‌.ವೈ.ಪಾಟೀಲ ಅವರಿಗೆ ಅವರ ಸ್ವಗ್ರಾಮ ದೇಸಾಯಿ ಕಲ್ಲೂರದಲ್ಲಿ ಭಾನುವಾರ  ಗ್ರಾಮಸ್ಥರಾದ ಯಲ್ಲಾಲಿಂಗ ಉಕಲಿ, ಸಿದ್ದರಾಮ ಉಕಲಿ ಸುಮಾರು 2 ಕೆ.ಜಿ. ತೂಕದ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು ಇನ್ನು ಕೆಲವು ಕಾರ್ಯಕರ್ತರು ಚಿನ್ನ ತೊಡಿಸಿ ಹಾರೈಸಿದರು.

ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಸ್ವಗ್ರಾಮಕ್ಕೆ ಆಗಮಿಸಿದ ಪಾಟೀಲರನ್ನು ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ಗ್ರಾಮದಲ್ಲಿ ಸಿದ್ದರಾಮೇಶ್ವರ ದೇವಸ್ಥಾನದ ಹತ್ತಿರ ಮತ್ತು ಬಿದನೂರ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.

ಎಂ.ವೈ.ಪಾಟೀಲರು ಮಾತನಾಡಿ ದೇಸಾಯಿ ಕಲ್ಲೂರ ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಂತೆ ಗೋಳನೂರು ಮತ್ತು ಮೊರಟಗಿ ಮಧ್ಯೆ ಭೀಮಾ ನದಿಗೆ ಬ್ಯಾರೇಜ್ ಕಂ ಬ್ರಿಜ್ ನಿರ್ಮಿಸಲಾಗುವುದು. ಗ್ರಾಮಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ದುರಸ್ತಿ ಮಾಡಿಸಲಾಗುವುದು. ಗ್ರಾಮದಲ್ಲಿ ಸಿಮೆಂಟ್ ರಸ್ತೆ ಮತ್ತು ಮಹಿಳಾ ಶೌಚಾಲಯ ನಿರ್ಮಾಣ ಮಾಡಲಾಗುವದು ಎಂದರು.

ADVERTISEMENT

ಜಿ.ಪಂ ಮಾಜಿ ಸದಸ್ಯ ಪ್ರಕಾಶ ಜಮಾದಾರ ಮಾತನಾಡಿ ಎಂ.ವೈ. ಪಾಟೀಲರು ತಾಲ್ಲೂಕಿನ ಜನರ ಕುಂದುಕೊರತೆಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ ಎಂದರು.

ಜಿ.ಪಂ ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಿಡದ, ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್ ಕಾರ್ಯದರ್ಶಿ ಶರಣು ಕುಂಬಾರ, ಶರಣಪ್ಪ ಉಕಲಿ, ಸುಭಾಷ್ ರೂಗಿ, ಬಾಬುಗೌಡ ತೆಲ್ಲೂರ, ವಿಠ್ಠಲ ನಾಟೀಕಾರ, ಅಮೃತ ಪಾಟೀಲ, ಗಂಗಾಧರ ಶ್ರೀಗಳು, ಶಿವುಕುಮಾರ ಚಿರಂತಿಮಠ, ನಾಗಯ್ಯ ಆಕಾಶಮಠ, ಬಸವರಾಜ ಅಫಜಲಪುರಕರ, ಮುತ್ತಪ್ಪ ವರಗಿ, ಸಿದ್ದಪ್ಪ ತಳವಾರ, ಸಂತೋಷ ಪಟ್ಟೆದ, ಬಸವರಾಜ ಮಾಸ್ತರ್, ಸಿದ್ದರಾಮಪ್ಪ ಪಂಚಕಟ್ಟಿ, ರಾಜಶೇಖರ ದುಧನಿ, ಸಿದ್ದರಾಮಯ್ಯ ದೇವಣಗಾಂವ್, ರಾಚಪ್ಪ ನೆಲೋಗಿ, ಬಾಬು ಸಾಹುಕಾರ, ನಾಗಯ್ಯ ಸ್ವಾಮಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.