ADVERTISEMENT

ಸಿದ್ದಾರ್ಥ ಕಿವುಡ, ಮೂಕ ಮಕ್ಕಳ ಶಾಲೆಗೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 18 ಮೇ 2024, 15:20 IST
Last Updated 18 ಮೇ 2024, 15:20 IST
ಭಾಗಣ್ಣ
ಭಾಗಣ್ಣ   

ಕಲಬುರಗಿ: ನಗರದ ದಕ್ಷಿಣ ಭಾರತ ದಲಿತ ವಿದ್ಯಾ ಸಂಸ್ಥೆಯ ಸಿದ್ದಾರ್ಥ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಪ್ರೌಢಶಾಲೆಗೆ ಪ್ರಸ್ತುತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ ಎಂದು ಶಾಲೆಯ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

ಪರೀಕ್ಷೆ ಬರೆದಿದ್ದ ಶಾಲೆಯ 22 ವಿದ್ಯಾರ್ಥಿಗಳು ಪಾಸಾಗಿದ್ದು, ಶಾಲೆಗೆ ಶೇ 100 ರಷ್ಟು ಫಲಿತಾಂಶ ಬಂದಿದೆ. ಭಾಗಣ್ಣ ಅಮರೇಶ್ (ಶೇ 72.76), ಸಿದ್ದಣ್ಣ (ಶೇ 71.41), ರಾಮಸ್ವಾಮಿ (ಶೇ 70.60), ಅಭಿಷೇಕ (ಶೇ 69.70), ಕುಪೇಂದ್ರ (ಶೇ.69.6) ಹಾಗೂ ರೇಹಾನ್ ಮಹಮ್ಮದ್ (ಶೇ 68.58) ಅಂಕ ಪಡೆದು ಶಾಲೆ ಕೀರ್ತಿ ತಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಶಾಲಾ ಕಾರ್ಯದರ್ಶಿ ಮತ್ತು ಮುಖ್ಯಶಿಕ್ಷಕ ಹಾಗೂ ಬೋಧಕ–ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT
ಸಿದ್ದಣ್ಣ
ರಾಮಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.