ADVERTISEMENT

ಮಹಾರಾಷ್ಟ್ರದ ವ್ಯಕ್ತಿಯಿಂದ 180 ಗ್ರಾಂ ಚಿನ್ನಾಭರಣ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 17:20 IST
Last Updated 12 ಜನವರಿ 2022, 17:20 IST
ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದಲ್ಲಿ ನಡೆದ ದತ್ತ ಮಹಾರಾಜರ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಬಂಗಾರ ಕಳ್ಳತನ ಮಾಡಿದ್ದ ಮಹಾರಾಷ್ಟ್ರದ ನಾತುಲಾಲ ಗಾಯಕವಾಡನನ್ನು ದೇವಲಗಾಣಗಾಪುರದ ಪೊಲೀಸರು ಬಂಧಿಸಿದ್ದಾರೆ
ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದಲ್ಲಿ ನಡೆದ ದತ್ತ ಮಹಾರಾಜರ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಬಂಗಾರ ಕಳ್ಳತನ ಮಾಡಿದ್ದ ಮಹಾರಾಷ್ಟ್ರದ ನಾತುಲಾಲ ಗಾಯಕವಾಡನನ್ನು ದೇವಲಗಾಣಗಾಪುರದ ಪೊಲೀಸರು ಬಂಧಿಸಿದ್ದಾರೆ   

ಅಫಜಲಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಈಚೆಗೆ ನಡೆದ ದತ್ತ ಮಹಾರಾಜರ ಜನ್ಮೋತ್ಸವ ಕಾರ್ಯಕ್ರ ಮದಲ್ಲಿ 180 ಗ್ರಾಂ ಚಿನ್ನ ಕಳವು ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರದ ಶಾಸ್ತ್ರಿ ನಗರ ಸಲವಾಡ ಬೀಡದ ನಾತುಲಾಲ ಗಾಯಕವಾಡ ಎಂಬಾತನನ್ನು ಬುಧವಾರ ದೇವಲಗಾಣಗಾಪುರದ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ಹೈದರಾಬಾದ್‌ನ ವೆಂಕಟೇಶ ಸಂಗಯ್ಯ ಎಂಬುವವರ 15 ಗ್ರಾಂ ತೂಕದ ಬಂಗಾರದ ಸರ, 30 ಗ್ರಾಂ ತೂಕದ ಬಂಗಾರದ ಮಂಗಳಸೂತ್ರ, ಹಾಗೂ ಪುಣೆಯ ವಿಕಾಸ ರಾವಸಾಹೇಬ ಹಗವಾನೆ ಎಂಬುವವರ 60 ಗ್ರಾಂ ತೂಕದ ಬಂಗಾರದ ಸರ ಸೇರಿ ಒಟ್ಟು 180 ಗ್ರಾಂ ತೂಕದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಪ್ರಕರಣ ತನಿಖೆ ಕೈಕೊಂಡು ಕಳ್ಳತನವಾದ ಬಂಗಾರದ ಆಭರಣಗಳ ಪತ್ತೆ ಕುರಿತು ಸಿಪಿಐ ಜಗದೇವಪ್ಪ ಪಾಳಾ ನೇತೃತ್ವದಲ್ಲಿ ದೇವಲಗಾಣಗಾಪೂರ ಪೊಲೀಸ್ ಠಾಣೆಯ ಪಿಎಸ್‌ಐ ರಾಜಶೇಖರ ರಾಠೋಡ ಮತ್ತು ಪೊಲೀಸ್ ಸಿಬ್ಬಂದಿ ತಂಡವನ್ನು ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.