ADVERTISEMENT

ಪೊಲೀಸರಿಂದ ಮುಂದುವರಿದ ಶೋಧ: 30 ಕೆ.ಜಿ ಗಾಂಜಾ ಜಪ್ತಿ

ಸಂಗಾಪುರದಲ್ಲಿ ತೊಗರಿ ಹೊಲದಲ್ಲಿ ಗಾಂಜಾ ಬೇಸಾಯ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 15:21 IST
Last Updated 14 ಸೆಪ್ಟೆಂಬರ್ 2020, 15:21 IST
ಚಿಂಚೋಳಿ ತಾಲ್ಲೂಕು ಸಂಗಾಪುರದಲ್ಲಿ ಅಕ್ರಮವಾಗಿ ತೊಗರಿ ಹೊಲದಲ್ಲಿ ಗಾಂಜಾ ಬೆಳೆದಿರುವುದು ಸೋಮವಾರ ಪತ್ತೆ ಹಚ್ಚಿದ ಕುಂಚಾವರಂ ಪೊಲೀಸರು
ಚಿಂಚೋಳಿ ತಾಲ್ಲೂಕು ಸಂಗಾಪುರದಲ್ಲಿ ಅಕ್ರಮವಾಗಿ ತೊಗರಿ ಹೊಲದಲ್ಲಿ ಗಾಂಜಾ ಬೆಳೆದಿರುವುದು ಸೋಮವಾರ ಪತ್ತೆ ಹಚ್ಚಿದ ಕುಂಚಾವರಂ ಪೊಲೀಸರು   

ಚಿಂಚೋಳಿ: ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡ ತಾಲ್ಲೂಕಿನ ಸಂಗಾಪುರದಲ್ಲಿ ತೊಗರಿ ಹೊಲದಲ್ಲಿ ಗಾಂಜಾ ಬೇಸಾಯ ಮಾಡುತ್ತಿರುವುದು ಕುಂಚಾವರಂ ಠಾಣೆಯ ಸಬ್ ಇನಸ್ಪೆಕ್ಟರ್ ಉಪೇಂದ್ರಕುಮಾರ ನೇತೃತ್ವದ ಪೊಲೀಸರ ತಂಡ ಸೋಮವಾರ ಪತ್ತೆ ಹಚ್ಚಿದೆ.

ಪ್ರಕರಣ ಸಂಬಂಧ ಸಂಗಾಪುರದ ಸರ್ವೆ ನಂ–6ರ ತೊಗರಿ ಹೊಲದಲ್ಲಿ ಬೆಳೆದಿದ್ದ ₹1.20 ಲಕ್ಷ ಮೊತ್ತದ 30 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಂಡು ಆರೋಪಿ ಚಂದರ್ ಭಿಕ್ಕು ಪವಾರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದಾಳಿಯಲ್ಲಿ ಸಬ್ ಇನಸ್ಪೆಕ್ಟರ್ ಅವರಿಗೆ ರಾಜಶೇಖರ, ತಿಪ್ಪಣ್ಣ, ಹುಲಿಯಪ್ಪ ಮತ್ತು ರಾಹುಲ್ ಹಾಗೂ ಸಿಬ್ಬಂದಿ ನೆರವಾಗಿದ್ದಾರೆ. ಇದು ಸಂಗಾಪುರದಲ್ಲಿ ಪತ್ತೆಯಾದ 2ನೇ ಪ್ರಕರಣವಾಗಿದ್ದು, ಕುಂಚಾವರಂ ಪೊಲೀಸರು ಈ ಹಿಂದೆ ಸಂಗಾಪುರದಲ್ಲಿ ಒಂದು ಮತ್ತು ಲಿಂಗಾನಗರ ತಾಂಡಾದಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.