ADVERTISEMENT

ಕಲಬುರ್ಗಿ: ವರ್ಷದಲ್ಲಿ 43,797 ಜನ ವಿಮಾನಯಾನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 16:20 IST
Last Updated 21 ನವೆಂಬರ್ 2020, 16:20 IST
ಕಲಬುರ್ಗಿ ವಿಮಾನ ನಿಲ್ದಾಣ
ಕಲಬುರ್ಗಿ ವಿಮಾನ ನಿಲ್ದಾಣ   

ಕಲಬುರ್ಗಿ: ಕಲಬುರ್ಗಿಯಿಂದ ವಿಮಾನಯಾನ ಆರಂಭಗೊಂಡು ನ.22ಕ್ಕೆ ಒಂದು ವರ್ಷ ತುಂಬುತ್ತಿದ್ದು,ನ.21ರ ವರೆಗೆ ಒಟ್ಟು 43,797 ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಹಾರಾಟ ನಡೆಸಿದ ಒಟ್ಟಾರೆ ವಿಮಾನಗಳ ಸಂಖ್ಯೆ 1,042.

ವಿಮಾನಯಾನಕ್ಕೆ ಇಲ್ಲಿಯ ಪ್ರಯಾಣಿಕರ ಉತ್ತೇಜನ ಗಮನಿಸಿದ ಸ್ಟಾರ್‌ ಏರ್‌ ಸಂಸ್ಥೆ ದೆಹಲಿಯ ಹಿಂಡನ್‌ಗೆ ನೇರ ವಿಮಾನ ಸೇವೆಯನ್ನು ಈಚೆಗಷ್ಟೇ ಆರಂಭಿಸಿದೆ.

ADVERTISEMENT

ಪ್ರಸ್ತುತ ಕಲಬುರ್ಗಿಯಿಂದ ಬೆಂಗಳೂರಿಗೆ ನಿತ್ಯ ಎರಡು ಹಾಗೂ ಕಲಬುರ್ಗಿಯಿಂದ ದೆಹಲಿಯ ಹಿಂಡನ್‌ಗೆ ವಾರಕ್ಕೆ ಮೂರು ದಿನ ವಿಮಾನ ಸೇವೆ ಲಭ್ಯವಿದೆ. ಕಲಬುರ್ಗಿಯಿಂದ ತಿರುಪತಿ (ಉಡಾನ್ -3 ಅಡಿಯಲ್ಲಿ ಅನುಮೋದನೆ ನೀಡಲಾಗಿದೆ), ಮುಂಬೈ, ಹುಬ್ಬಳ್ಳಿ, ಹೈದರಾಬಾದ್‌, ಅಹಮದಾಬಾದ್‌ಗೆ ನೇರ ವಿಮಾನ ಸೇವೆ ಆರಂಭಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ.

ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಇಳಿಯಲು ಸೌಲಭ್ಯ ಇಲ್ಲ. ತಕ್ಷಣವೇ ಈ ಸೌಲಭ್ಯ ಕಲ್ಪಿಸಿ ದೊಡ್ಡ ವಿಮಾನಗಳ ಸೇವೆ ಲಭ್ಯವಾಗುವಂತಾಗಬೇಕು ಹಾಗೂ ವಿಮಾನ ನಿಲ್ದಾಣದಲ್ಲಿ ರೆಸ್ಟೋರೆಂಟ್‌, ವಿಶ್ರಾಂತಿ ಕೊಠಡಿಗಳಂತಹ ಪ್ರಯಾಣಿಕ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.