ADVERTISEMENT

ಸೋನ್ಯಾಲಗಿರಿಯಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ: 501 ದಂಪತಿಗಳಿಂದ ಲಿಂಗ ಪೂಜೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:47 IST
Last Updated 16 ಫೆಬ್ರುವರಿ 2026, 4:47 IST
ಕಮಲಾಪುರ ತಾಲ್ಲೂಕಿನ ಸೋನ್ಯಾಲಗಿರಿಯಲ್ಲಿ 501 ಲಿಂಗ ಪೂಜೆ, ಮಹಾರುದ್ರ ಯಾಗ ನಡೆಯಿತು
ಕಮಲಾಪುರ ತಾಲ್ಲೂಕಿನ ಸೋನ್ಯಾಲಗಿರಿಯಲ್ಲಿ 501 ಲಿಂಗ ಪೂಜೆ, ಮಹಾರುದ್ರ ಯಾಗ ನಡೆಯಿತು   

ಕಮಲಾಪುರ: ಸೋನ್ಯಾಲಗಿರಿಯಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ನಿಮಿತ್ತ 501 ಲಿಂಗಗಳಿಗೆ 501 ದಂಪತಿಗಳಿಂದ ಪೂಜೆ ನೆರವೇರಿತು.

ಸೋನ್ಯಾಲಗಿರಿ ಪೀಠಾಧಿಪತಿ ಪರವತಲಿಂಗ ಪರಮೇಶ್ವರ ಮಹಾರಾಜರು ಅವರ ಪೀಠಾಧಿಪತಿಗಳು ಸೋನಾಲಗಿರಿ ಸಂಕಲ್ಪದಂತೆ 501 ಲಿಂಗ ಮಧ್ಯೆ ಸ್ಥಾಪಿತ ವಿಜೇಶ್ವರ ಸಹಿತ ಪಾರ್ವತಿ ಪರಮೇಶ್ವರರಿಗೆ ರುದ್ರಾಭಿಷೇಕ ಹಾಗೂ ಲೋಕ ಕಲ್ಯಾಣಾರ್ಥ ನವಗ್ರಹ, ಪಂಚಕಳಶ, ಸ್ವಸ್ತಿ ಪುಣ್ಯಹವಾಚನ, ಮಹಾ ಮೃತ್ಯುಂಜಯ, ನವದುರ್ಗಾ, ಏಕಾದಶ ರುದ್ರ ದೇವತ ಮಹಾರುದ್ರ ಹೋಮ ನಡೆಯಿತು.

ಬೆಡಸೂರ ಕೆ ತಾಂಡಾದಿಂದ ಆರಂಭವಾದ ಪಲ್ಲಕ್ಕಿ ಮೆರವಣಿಗೆ 101 ಕುಂಭಕಳಶ ಡೊಳ್ಳು, ವಾದ್ಯ, ಸಂಗೀತ ಮೇಳದೊಂದಿಗೆ ಹೊರಟು ಸಂಜೆ ಸೋನ್ಯಾಲಗಿರಿ ತಲುಪಿತು. ನಂತರ ಧರ್ಮ ಧ್ವಜಾರೋಹಣ ನೆರವೇರಿಸಲಾಯಿತು. ರಾತ್ರಿ ಭಜನೆ, ಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ADVERTISEMENT

ಪ್ರೇಮಸಿಂಗ್ ಜಾಧವ, ಮೋಹನ್, ಗೋರಖನಾಥ, ಚನ್ನಪ್ಪ ಮಾಸ್ಟರ್, ಲೋಹಿತ ಚೌವ್ಹಾಣ ಮತ್ತಿತರರು ಹಾಜರಿದ್ದರು.

ಧಾರ್ಮಿಕ ಸಭೆ ಇಂದು: 

ಸೋನ್ಯಾಲಗಿರಿ ಮಹಾಶಿವರಾತ್ರಿ ನಿಮಿತ್ತ ಫೆ.16 ಮಧ್ಯಾಹ್ನ 12.30ಕ್ಕೆ ಧಾರ್ಮಿಕ ಸಭೆ ಆಯೋಜಿಸಲಾಗಿದೆ. ಭಾಲ್ಕಿಯ ಬಸವಲಿಂಗ ಪಟ್ಟದೇವರು, ಕಡಗಂಚಿಯ ವೀರಭದ್ರ ಶಿವಾಚಾರ್ಯ, ಹುಲಸೂರ ಶಿವಾನಂದ ಮಹಾಸ್ವಾಮೀಜಿ, ಮುಗಳನಾಗಾಂವ ಜೇಮಸಿಂಗ್ ಮಹಾರಾಜ, ಗೊಬ್ಬುರವಾಡಿಯ ಬಳಿರಾಮ ಮಹಾರಾಜ, ಶಾಸಕ ಅವಿನಾಶ ಜಾಧವ, ಬಸವರಾಜ ಮತ್ತಿಮಡು, ಸಂಸದ ಸಾಗರ ಖಂಡ್ರೆ, ಜಗದೇವ ಸಾಹುಕಾರ, ಭಗವಂತ ಖೂಬಾ, ರೇವುನಾಯಕ, ಬಾಬು ಹೊನ್ನಾನಾಯಕ, ಸುಭಾಷ ರಾಠೋಡ, ಮಣಿಕಂಠ ರಾಠೋಡ ಮತ್ತಿತರರು ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.