ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಕಸ್ಮಿಕ ಬೆಂಕಿ ಪ್ರಮುಖ ದಾಖಲೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 15:33 IST
Last Updated 14 ಜನವರಿ 2025, 15:33 IST
ಅಫಜಲಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ತಗಲಿ ದಾಖಲೆಗಳು ಸುಟ್ಟಿರುವುದು.
ಅಫಜಲಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ತಗಲಿ ದಾಖಲೆಗಳು ಸುಟ್ಟಿರುವುದು.   

ಅಫಜಲಪುರ; ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮಂಗಳವಾರ ಆಕಸ್ಮಿಕ ಬೆಂಕಿದಲ್ಲಿ ಪ್ರಮುಖ ದಾಖಲೆಗಳಿಗೆ ಹಾನಿಯಾಗಿದೆ.

ಸ್ಥಳಕ್ಕೆ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯವರು ಭೇಟಿ ನೀಡಿದ್ದಾರೆ.ಜೆಸ್ಕಾಂ ಸಿಬ್ಬಂದಿ ಪ್ರಕಾರವಾಗಿ ಇದು ವಿದ್ಯುತ್ ಶಾರ್ಕ್ ಸರ್ಕ್ಯೂಟ್ ದಿಂದಾಗಿ ಬೆಂಕಿ ಹತ್ತಿಲ್ಲ ಮತ್ತೆ ಬೇರೆ ಯಾವುದೇ ಕಾರಣ ಇರಬಹುದೆಂದು ಅವರು ಹೇಳುತ್ತಾರೆ.ಯಾವ ರೀತಿಯಲ್ಲಿ ದಾಖಲೆಗಳಿಗೆ ಬೆಂಕಿ ಹತ್ತಿದೆ ಎಂಬುದರ ಬಗ್ಗೆ ಅಲ್ಲಿ ನೆರೆದಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಿಬ್ಬಂದಿಗಳು ಹಾಗೂ ಶಿಕ್ಷಕರು ಬೇರೆ ರೀತಿಯ ಕಾರಣಗಳನ್ನು ಕೊಡುತ್ತಿದ್ದಾರೆ ಆದರೂ ತನಿಕೆಯಿಂದ ಸತ್ಯ ಹೊರಬರಲಿದೆ ಎಂದು ಹೇಳಲಾಗುತ್ತಿದೆ

ಮಕರ ಸಂಕ್ರಮಣ ನಿಮಿತ್ಯ ಕಚೇರಿಗೆ ರಜೆ ಇದ್ದರೂ ಸಹ ಯಾವ ರೀತಿಯಾಗಿ ದಾಖಲೆಗಳ ಕೋಣೆಗೆ ಬೆಂಕಿ ಹತ್ತಿದೆ ಎಂಬುದರ ಬಗ್ಗೆ ಪತ್ತೆ ಆಗಬೇಕಾಗಿದೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಖಲೆಗಳ ಕೋಣೆಗೆ ಯಾವ ರೀತಿಯಾಗಿ ಬೆಂಕಿ ಹತ್ತಿದೆ ಎಂಬುದರ ಬಗ್ಗೆ ತನಿಖೆ ನಂತರ ಗೊತ್ತಾಗಬೇಕಾಗಿದೆ ಆದರೆ ಅಲ್ಲಿ ಯಾವುದು ಪ್ರಮುಖ ದಾಖಲೆಗಳಿಗೆ ಹಾನಿಯಾಗಿಲ್ಲ ಎಲ್ಲವೂ ಅವಧಿ ಮುಗಿದ ದಾಖಲೆಗಳಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಪಾಟೀಲ್ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.