ADVERTISEMENT

ಅಫಜಲಪುರ: ಮಳೆಗೆ 50 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 7:34 IST
Last Updated 15 ಆಗಸ್ಟ್ 2025, 7:34 IST
ಅಫಜಲಪುರ ಪಟ್ಟಣದ ವಾರ್ಡ್ ನಂ.1ರಲ್ಲಿ ನಿರಂತರ ಮಳೆಗೆ ಸತೀಶ್ ಪದಕಿ ಅವರ ಮನೆಯ ಗೋಡೆ ಕುಸಿದು ಬಿದ್ದಿರುವುದು
ಅಫಜಲಪುರ ಪಟ್ಟಣದ ವಾರ್ಡ್ ನಂ.1ರಲ್ಲಿ ನಿರಂತರ ಮಳೆಗೆ ಸತೀಶ್ ಪದಕಿ ಅವರ ಮನೆಯ ಗೋಡೆ ಕುಸಿದು ಬಿದ್ದಿರುವುದು   

ಅಫಜಲಪುರ: ನಿರಂತರ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಈವರೆಗೆ ಸುಮಾರು 50 ಮನೆಗಳಿಗೆ ಹಾನಿಯಾಗಿದೆ ಎಂದು ತಹಶೀಲ್ದಾರ್‌ ಸಂಜುಕುಮಾರ ದಾಸರ ತಿಳಿಸಿದ್ದಾರೆ.

ಈ ಕುರಿತು ಗುರುವಾರ ಮಾಹಿತಿ ನೀಡಿರುವ ಅವರು, ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹವಮಾನ ವರದಿ ಪ್ರಕಾರ ಆಗಸ್ಟ್‌ 21ರವರೆಗೆ ಮಳೆಯಾಗಲಿದೆ. ನಿರಂತರ ಮಳೆಯಿಂದ ಮಣ್ಣಿನ ಗೋಡೆಗಳು ನೆನೆದು ಕುಸಿದು ಬೀಳುತ್ತಿವೆ. ಮುನ್ನೆಚ್ಚರಿಕೆಯಾಗಿ ಜನರು ಅಂತಹ ಮನೆಗಳಲ್ಲಿ ವಾಸ ಮಾಡಬಾರದು ಎಂದು ಜಾಗೃತಿ ಮಾಡಲಾಗುತ್ತಿದೆ’ ಎಂದರು.

‘ಮಹಾರಾಷ್ಟ್ರ, ಆಳಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಬೋರಿಹಳ್ಳ ತುಂಬಿ ಹರಿಯುತ್ತಿದೆ. ಯಾರು ಹಳ್ಳಗಳನ್ನು ದಾಟುವ ಸಾಹಸ ಮಾಡಬಾರದು. ಭೀಮಾ ನದಿಯೂ ತುಂಬಿ ಹರಿಯುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಧ್ವಜಾರೋಹಣ ಸ್ಥಳ ಬದಲು: ಕಳೆದ ಸ್ವಾತಂತ್ರ್ಯ ದಿನಾಚರಣೆಯನ್ನು ಬಸ್ ಡಿಪೋ ಹತ್ತಿರದ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಈ ವರ್ಷ ಮಳೆಯಿಂದಾಗಿ ಅಲ್ಲಿ ಕಾರ್ಯಕ್ರಮ ರದ್ದು ಮಾಡಲಾಗಿದ್ದು, ತಹಶೀಲ್ದಾರರ ಕಚೇರಿ ಆವರಣದಲ್ಲಿ ಧ್ವಜಾರೋಹಣ ಮಾಡಲಾಗುವುದು. ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.