ADVERTISEMENT

ಆಳಂದ | ಅನೈತಿಕ ಸಂಬಂಧ ಶಂಕೆ: ಸ್ನೇಹಿತನಿಂದ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 7:01 IST
Last Updated 9 ಜುಲೈ 2025, 7:01 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಆಳಂದ: ಅನೈತಿಕ ಸಂಬಂಧದ ಸಂಶಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಅವನ ಸ್ನೇಹಿತನೇ ಕೊಲೆ ಮಾಡಿದ ಘಟನೆ ತಾಲ್ಲೂಕಿನ ನರೋಣಾ ಪೊಲೀಸ್‌ ಠಾಣೆ ವ್ಯಾಪ್ತಿಯ ಮುರುಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದ ಅಂಬರೀಶ ಸಂಗಣ್ಣ ಗೌನ್ನಳ್ಳಿ(26) ಕೊಲೆಯಾದ ಯುವಕ.

ADVERTISEMENT

‘ಕಮಲಾಪುರ ತಾಲ್ಲೂಕಿನ ಮುರಡಿ ಗ್ರಾಮದ ಅಜಯ್‌ ಮತ್ತಿತರು ಕಲಬುರಗಿಯಲ್ಲಿ ವಾಸವಾಗಿದ್ದು, ಅಂಬರೀಶ ಜೊತೆ ಸ್ನೇಹ ಬೆಳೆದಿತ್ತು. ಅಜಯ್‌ ಮದುವೆಯಾಗಿದ್ದ. ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಅಜಯ್, ಮಂಗಳವಾರ ಕಲಬುರಗಿಯಿಂದ ಅಂಬರೀಶನನ್ನು ತನ್ನ ಮನೆಗೆ ಕರೆಯಿಸಿಕೊಂಡಿದ್ದಾನೆ. ಮನೆಯಲ್ಲಿ ವಿದ್ಯುತ್‌ ತಂತಿಯನ್ನು ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಸಂಚುಮಾಡಿ ನಾಲ್ಕೈದು ಜನ ಕೂಡಿಕೊಂಡು ಮಗನನ್ನು ಕೊಲೆ ಮಾಡಿದ್ದಾರೆ’ ಎಂದು ಕೊಲೆಯಾದ ಅಂಬರೀಶನ ತಾಯಿ ನರೋಣಾ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.