ADVERTISEMENT

ಕಾಳಗಿ | ನೇರ, ನಿಷ್ಠುರ ವಚನಕಾರ ಅಂಬಿಗರ ಚೌಡಯ್ಯ: ಪೃಥ್ವಿರಾಜ ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:50 IST
Last Updated 22 ಜನವರಿ 2026, 4:50 IST
ಚಿತ್ತಾಪುರದ ತಹಶೀಲ್ದಾರ್‌ ನಾಗಯ್ಯ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತಾಲ್ಲೂಕು ಆಡಳಿತದಿಂದ ಪ್ರಜಾಸೌಧ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ ಮಾಡಲಾಯಿತು
ಚಿತ್ತಾಪುರದ ತಹಶೀಲ್ದಾರ್‌ ನಾಗಯ್ಯ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತಾಲ್ಲೂಕು ಆಡಳಿತದಿಂದ ಪ್ರಜಾಸೌಧ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ ಮಾಡಲಾಯಿತು   

ಕಾಳಗಿ: ‘12ನೇ ಶತಮಾನದ ಬಸವಾದಿ ಶರಣರ ಅನುಭವ ಮಂಟಪದಲ್ಲಿ ನೇರ, ನಿಷ್ಠುರ ನಡತೆ ಹೊಂದಿದ್ದ ನಿಜಶರಣ ಅಂಬಿಗರ ಚೌಡಯ್ಯನವರು ಶ್ರೇಷ್ಠ ವಚನಕಾರರಾಗಿದ್ದರು’ ಎಂದು ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ಹೇಳಿದರು.

ಬುಧವಾರ ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಹಮ್ಮಿಕೊಂಡಿದ ಜಯಂತ್ಯುತ್ಸವದಲ್ಲಿ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಕೀರ್ತನಕಾರ ಶಾಮರಾವ ಕಡಬೂರ, ನಾಗಣ್ಣಾ ಕಡಬೂರ ವಚನ ಹೇಳಿದರು. ಗ್ರೇಡ್-2 ತಹಶೀಲ್ದಾರ್ ರಾಜೇಶ್ವರಿ, ಶಿರಸ್ತೇದಾರ ಸಂತೋಷ ಚಂದನಕೇರಿ, ಕಂದಾಯ ನಿರೀಕ್ಷಕ ರವೀಂದ್ರನಾಥ ಮುತ್ತಗಿ, ಪಟ್ಟಣ ಪಂಚಾಯಿತಿ ಸದಸ್ಯೆ ಅಂಬವ್ವ ರಾಜಾಪುರ, ಕೋಲಿ ಸಮಾಜದ ಮುಖಂಡ ಶಿವಶರಣಪ್ಪ ಗುತ್ತೇದಾರ, ರೇವಣಸಿದ್ದಪ್ಪ ಚೇಂಗಟಾ, ಶಿವರಾಯ ಕೋಯಿ, ಪ್ರಭು ರಟಕಲ್, ಶಿವಕುಮಾರ ಕಮಕನೂರ, ಸಿದ್ದು ಕೇಶ್ವಾರ, ಜಗನ್ನಾಥ ತೇಲಿ, ಜಗನ್ನಾಥ ಚಂದನಕೇರಿ, ದೇವಿಂದ್ರಪ್ಪ ಚಿಮ್ಮನಚೋಡ, ನೀಲಕಂಠ ಚಿಮ್ಮ ಇದ್ಲಾಯಿ, ಮಲ್ಲು ಮರಗುತ್ತಿ, ತುಳಸಿರಾಮ ಮಂತಟ್ಟಿ, ಕಾಳಪ್ಪ ಕರೆಮನೋರ, ಸಂಗಮೇಶ ಬಡಿಗೇರ, ಬಾಬು ನಾಟೀಕಾರ, ದಯಾನಂದ ಹೊಸಮನಿ, ಕಾಶಿನಾಥ ತೆಲಗಾಣಿ, ಮಾರುತಿ ನಾಯಿಕೋಡಿ ಅನೇಕರು ಇದ್ದರು.

ADVERTISEMENT

ಪಟ್ಟಣ ಪಂಚಾಯಿತಿ: ಕಚೇರಿಯಲ್ಲಿ ಮುಖ್ಯಾಧಿಕಾರಿ ಪಂಕಜಾ ಎ. ಅವರು ಚೌಡಯ್ಯ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖಂಡ ಸಿದ್ರಾಮಪ್ಪ ಕಮಲಾಪುರ, ಪರಮೇಶ್ವರ ಮಡಿವಾಳ, ದತ್ತು ಗುತ್ತೇದಾರ, ಸುಂದರ ಸಾಗರ, ನಾಗರಾಜ ಮಡಿವಾಳ ಮೊದಲಾದವರು ಇದ್ದರು.

ಭವ್ಯಮೆರವಣಿಗೆ: ಚಾಮುಂಡೇಶ್ವರಿ ಪ್ರಾಥಮಿಕ-ಪ್ರೌಢ ಶಾಲೆಯ ಶಿಕ್ಷಕರು ಮತ್ತು ಮಕ್ಕಳಿಂದ ಬುಧವಾರ ಅಂಬಿಗರ ಚೌಡಯ್ಯ ಮತ್ತು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.

ನೀಲಕಂಠ ಕಾಳೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಗೆ ಹಿರೇಮಠದ ನೀಲಕಂಠ ಮರಿದೇವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ದಾಸೋಹ ದಿನ: ನಿಸರ್ಗ ಗುರುಕುಲದಲ್ಲಿ ಅಂಬಿಗರ ಚೌಡಯ್ಯ ಮತ್ತು ಸಿದ್ದಗಂಗಾ ತ್ರಿವಿಧ ದಾಸೋಹ ಮೂರ್ತಿ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪ್ರಧಾನ ಅಧ್ಯಾಪಕಿ ಶಿವಲೀಲಾ ಅಷ್ಟಗಿ ಪೂಜೆ ಸಲ್ಲಿಸಿದರು. ಡೊಣ್ಣೂರ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮಲ್ಲಪ್ಪ ಬಿಟ್ಟಣ್ಣವರ್ ಮಕ್ಕಳಿಗೆ ಅನ್ನದಾಸೋಹ ಮಾಡಿದರು. ಮಾತೃಭಾರತಿ ಸಮಿತಿ ಅಧ್ಯಕ್ಷೆ ಸಿದ್ದಲಿಂಗಮ್ಮ ಮಾನಶೆಟ್ಟಿ, ಭಾಗೀರಥಿ ಪಡಶೆಟ್ಟಿ, ವಿಜಯಲಕ್ಷ್ಮೀ ಕಲಶೆಟ್ಟಿ, ಬಸಮ್ಮ ಹೂಗಾರ ಸೇರಿದಂತೆ ಶಿಕ್ಷಕರು, ಮಕ್ಕಳು ಇದ್ದರು.

‘ಚೌಡಯ್ಯನವರ ತತ್ವ ಬದುಕಿಗೆ ಬೆಳಕು’

ವಾಡಿ: ‘12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯನವರ ಬೋಧಿಸಿದ ತತ್ವಗಳು, ವಚನಗಳ ಸಾರ ಸರ್ವಕಾಲಕ್ಕೂ ಪ್ರಸ್ತುತ’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು.

ಬಿಜೆಪಿ ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದರು

ಯುವ ಮುಖಂಡ ವಿಠಲ ನಾಯಕ, ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ, ಎಸ್.ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ಮುಖಂಡರಾದ ಶರಣಗೌಡ ಚಾಮನೂರ, ಗಿರಿಮಲ್ಲಪ್ಪ ಕಟ್ಟಿಮನಿ, ಭೀಮರಾವ ದೊರೆ, ಅರ್ಜುನ ಕಾಳೆಕರ, ಹರಿ ಗಲಾಂಡೆ, ಬಸವರಾಜ ಕೊಲಿ, ಕಿಶನ ಜಾಧವ, ಅಂಬದಾಸ ಜಾಧವ, ಪ್ರಕಾಶ ಪುಜಾರಿ, ರಿಚರ್ಡ್‌ ಮಾರೆಡ್ಡಿ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ, ವಿಶಾಲ ನಿಂಬರ್ಗಾ, ರಾಜು ಕೊಲಿ, ವಿಶ್ವರಾಧ್ಯ ತಳವಾರ, ವಿಶ್ವನಾಥ ಬಳವಡಗಿ, ವಿಕ್ರಮ ಜಾಧವ, ರಾಜು ಗುತ್ತೇದಾರ, ನಿಂಗಪ್ಪ ತಳವಾರ ಸೇರಿದಂತೆ ಇತರಿದ್ದರು.

ಲಾಡ್ಲಾಪುರ: ಅಂಬಿಗರ ಚೌಡಯ್ಯ ಜಯಂತಿ

ವಾಡಿ: ಲಾಡ್ಲಾಪುರ ಗ್ರಾಮದಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು. ಗ್ರಾಪಂ ಸದಸ್ಯ ಬಸವರಾಜಗೌಡ ಮಾಲಿಪಾಟೀಲ ಧ್ವಜರೋಹಣ ನೆರವೇರಿಸಿದರು.

ಪಿಡಿಒ ಮಲ್ಲೇಶಪ್ಪ ಮಾಲಿಪಾಟೀಲ ಮಾತನಾಡಿ, ‘12ನೇ ಶತಮಾನದ ಶರಣರಲ್ಲಿ ಅಂಬಿಗರ ಚೌಡಯ್ಯನವರು ಅಗ್ರಗಣ್ಯ. ಅಸಮಾನತೆ ಹಾಗೂ ಮೂಢನಂಬಿಕೆ ವಿರುದ್ಧ ವಚನ ರಚಿಸಿದ್ದಾರೆ’ ಎಂದರು.

ಗ್ರಾಪಂ ಸದಸ್ಯ ನಾಗೇಂದ್ರಪ್ಪ ಮುಕ್ತೇದಾರ, ಪ್ರಮುಖರಾದ ಚಂದಪ್ಪ ಲಕಬಾ, ವಿಶ್ವನಾಥ ಗಂಧಿ, ಈರಣ್ಣ ಮಲ್ಕಂಡಿ, ಸಾಬಣ್ಣ ಆನೇಮಿ, ಸಾಬಣ್ಣ ಮುಸಲಾ, ಸಾಬಣ್ಣ ಗೊಡಗ, ಭೀಮರಾಯ ಚಪಾಟ್ಲಿ, ಬಾಬು ದಂಡಬಾ, ಮಲ್ಲಣ್ಣ ಗಂಜಿ, ಶರಣಪ್ಪ ಗೊಡಗ, ಶರಣಪ್ಪ ಗಂಜಿ, ಮಲ್ಲಪ್ಪ ಗಂಜಿ, ರಾಜು ಗೊಡಗ, ರಮೇಶ ಗೊಡಗ, ಸಂತೋಷ ಗೊಡಗ, ಮೌನೇಶ ಗೊಡಗ, ಸಾಬಣ್ಣ ನಕಾಲಿ ಹಾಗೂ ಇನ್ನಿತರರು ಇದ್ದರು.

‘ವಚನ ಸಾಹಿತ್ಯಕ್ಕೆ ಚೌಡಯ್ಯ ಕೊಡುಗೆ ಅಪಾರ’

ಜೇವರ್ಗಿ: ‘12ನೇ ಶತಮಾನದ ಶ್ರೇಷ್ಠ ವಚನಕಾರ ನಿಜಶರಣ ಅಂಬಿಗರ ಚೌಡಯ್ಯ ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರ, ಅಸ್ಪೃಶ್ಯತೆ ತೊಡೆದು ಹಾಕಲು ಅವಿರತವಾಗಿ ಶ್ರಮಿಸಿದ್ದಾರೆ’ ಎಂದು ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಕೋಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮೈಲಾರಿ ಗುಡೂರ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಗ್ರೇಡ್-2 ತಹಶೀಲ್ದಾರ್ ಗೋಪಾಲ ಕಪೂರ, ಪಶು ಇಲಾಖೆಯ ಡಾ.ಶೋಭಾ ಸಜ್ಜನ್, ಸಮಾಜ ಕಲ್ಯಾಣ ಇಲಾಖೆಯ ಸತೀಶ ಸಂಗನ, ಲೋಕೋಪಯೋಗಿ ಇಲಾಖೆಯ ಶಿವಾನಂದ ಹರವಾಳ, ಅರಣ್ಯ ಇಲಾಖೆಯ ಸಂತೋಷ ಯಚಿ, ಮರೆಪ್ಪ ಕೋಳಕೂರ, ಭಗವಂತರಾಯ ಬೆಣ್ಣೂರ, ವಸಂತ ನರಿಬೋಳ, ಶಿವಶರಣಪ್ಪ ಜಂಬೇರಾಳ, ಮಲ್ಲೇಶಗೌಡ ರೇವನೂರ, ಗಿರೀಶ ತುಂಬಗಿ, ಸಂತೋಷ ಜೈನಾಪುರ, ಬಾಗರಾಜ.ವಿ.ಟಿ, ಶಿವಣಗೌಡ ಹಂಗರಗಿ, ಮಲ್ಲಿಕಾರ್ಜುನ ಬೂದಿಹಾಳ, ರವಿಚಂದ್ರ ಗುತ್ತೇದಾರ, ದೇವಿಂದ್ರ ಚಿಗರಳ್ಳಿ, ಸಿದ್ರಾಮ ಕಟ್ಟಿ, ಗುರು ಜೈನಾಪೂರ, ಕಂಠೆಪ್ಪ ಹರವಾಳ, ಕಾಂತಪ್ಪ ಚನ್ನೂರ, ಸಾಯಬಣ್ಣ ಸೇರಿದಂತೆ ಅನೇಕರಿದ್ದರು. ಗ್ರಾಮ ಆಡಳಿತಾಧಿಕಾರಿ ಮಕ್ಬೂಲ್ ಪಟೇಲ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.