ಕಲಬುರಗಿ: ಇಲ್ಲಿನ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಎಲ್‌ಕೆಜಿ ಹಾಗೂ ಯುಕೆಜಿ ಮತ್ತು ನರ್ಸರಿ ಶಾಲೆಗಳನ್ನು ಸಂಭ್ರಮದಿಂದ ಆರಂಭಿಸಲಾಯಿತು.
ಶಾಲೆ ಕೋಣೆಗಳಿಗೆ ತಳಿರು– ತೋರಣ, ಹೂವಿನ ಹಾರಗಳು ಹಾಗೂ ಬಲೂನ್‍ಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಮಕ್ಕಳಿಗೆ ಹೂವು, ಸಿಹಿ ಹಂಚಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಶರಣಬಸವೇಶ್ವರರು ಹಾಗೂ ಸರಸ್ವತಿ ಭಾವಚಿತ್ರಕ್ಕೆ ಮಕ್ಕಳಿಂದ ಹಾರ ಹಾಕಿಸಿ, ದೀಪ ಬೆಳಗುವ ಜೊತೆಗೆ ಶಾಲೆಯ ತರಗತಿಗಳಿಗೆ ಚಾಲನೆ ನೀಡಲಾಯಿತು. ಮೊದಲ ದಿನವೆ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರೂ ಶಾಲೆಗೆ ಆಗಮಿಸಿದರು.
ವಿದ್ಯಾರ್ಥಿಗಳ ಜೊತೆಗೆ ಹಿರಿಯ ಶಿಕ್ಷಕಿಯರಾದ ಶಾರಾದಾ ರಾಂಪೂರೆ, ನಂದಾ ಪಾಟೀಲ ಮತ್ತು ಶಾಲೆಯ ಎಲ್ಲ ಶಿಕ್ಷಕ ಹಾಗೂ ಶಿಕ್ಷಕಿಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.