ADVERTISEMENT

ಕರ್ಮಯೋಗಿ ಪ್ರಶಸ್ತಿ ಪ್ರದಾನ ನಾಳೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 16:20 IST
Last Updated 22 ಆಗಸ್ಟ್ 2024, 16:20 IST
ಮನು ಬಳಿಗಾರ್‌
ಮನು ಬಳಿಗಾರ್‌    

ಕಲಬುರಗಿ: ಉದ್ಯಮಿ ಎಸ್.ಎಸ್.ಪಾಟೀಲರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಐವರು ಸಾಧಕರಿಗೆ ಕರ್ಮಯೋಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಎಸ್‌.ಆರ್‌.ಪಾಟೀಲ ಫೌಂಡೇಷನ್‌ ಅಧ್ಯಕ್ಷ ಮನು ಬಳಿಗಾರ್‌ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಎಸ್.ಆರ್.ಪಾಟೀಲ ಫೌಂಡೇಷನ್‌ ಹಾಗೂ ಪಾಟೀಲ ಗ್ರೂಪ್ ಆಫ್‌ ಇಂಡಸ್ಟ್ರೀಸ್ ವತಿಯಿಂದ ಈ ಸಮಾರಂಭ ಆಯೋಜಿಸಲಾಗಿದೆ’ ಎಂದು ವಿವರಿಸಿದರು.

‘ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ದಾಕ್ಷಾಯಿಣಿ ಎಸ್.ಅಪ್ಪಾ ಸಾನ್ನಿಧ್ಯ ವಹಿಸುವರು. ಸಂಸದ ರಾಧಾಕೃಷ್ಣ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸುವರು. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರುನ್ನುಮ್ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದರು.

ADVERTISEMENT

‘ಫೌಂಡೇಷನ್‌ ಗೌರವಾಧ್ಯಕ್ಷೆ ಸರೋಜಿನಿದೇವಿ ಎಸ್.ಪಾಟೀಲ ಉಪಸ್ಥಿತರಿರುವರು. ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆ ವಹಿಸುವರು. ಉದ್ಯಮಿ ರೇವಣಸಿದ್ದಪ್ಪ ಜಿ.ಪಾಟೀಲ್‌, ಪಾಟೀಲ ಗ್ರೂಪ್‌ ಆಫ್‌ ಇಂಡಸ್ಟ್ರೀಸ್ ಅಧ್ಯಕ್ಷ ಲಿಂಗರಾಜ ಎಸ್.ಪಾಟೀಲ, ನಿರ್ದೇಶಕ ಸಿದ್ದಲಿಂಗ ಎಸ್.ಪಾಟೀಲ ಪಾಲ್ಗೊಳ್ಳಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಾಟೀಲ್‌ ಗ್ರೂಪ್ ಆಫ್‌ ಇಂಡಸ್ಟ್ರೀಸ್ ನಿರ್ದೇಶಕ ಸಿದ್ಧಲಿಂಗ ಪಾಟೀಲ, ಸಂದೀಪ ಬಿ., ನಾಗೇಶ, ನಾಗರಾಜ, ರಾಜು ಕಣ್ಣಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.