ADVERTISEMENT

ಚಂದಾಪುರದಲ್ಲಿ‌ ಅಯ್ಯಪ್ಪ ಸ್ವಾಮಿಯ ಮಹಾಪಡಿ ಪೂಜೆ ಸಡಗರ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 10:38 IST
Last Updated 22 ಡಿಸೆಂಬರ್ 2025, 10:38 IST
   

ಚಿಂಚೋಳಿ (ಕಲಬುರಗಿ ಜಿಲ್ಲೆ): ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರದ ನವ ನಗರದಲ್ಲಿ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜಾ ಕಾರ್ಯಕ್ರಮ ಸೋಮವಾರ ಯಶಸ್ವಿಯಾಗಿ ಜರುಗಿತು.

ಗಣಪತಿ ಹವನ, ಗೋಪೂಜೆ, ಗಂಗೆ ಪೂಜೆ, ಅಯ್ಯಪ್ಪ ಸ್ವಾಮಿಯ ಅಭಿಷೇಕ, ಧೂಪದೀಪ, ನೈವೇದ್ಯ ಹಾಗೂ ಪಲ್ಲಕ್ಕಿ ಉತ್ಸವದೊಂದಿಗೆ ಮಹಾ ಪಡಿಪೂಜೆ ಹಾಗೂ ಮಹಾ ಪ್ರಸಾದ ಭಕ್ತಿಶ್ರದ್ಧೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಬಾಲ ಪ್ರತಿಭೆ ದಿಯಾ ಹೆಗಡೆ ಅವರ ಗಾನಸುಧೆ ಸಭಿಕರು ತಲೆ ದೂಗುವಂತೆ ಮಾಡಿತು.

ಜಗದೀಶ ಪಂತಲು ಹಾಗೂ‌ ಕರಬಸ್ಸಪ್ಪ ದೇಶಮುಖ, ಗುಂಡಪ್ಪ, ಲಕ್ಷ್ಮೀಕಾಂತ, ಚನ್ನಬಸ್ಸಪ್ಪ, ರಾಘವೇಂದ್ರ, ಬಶೀರಾಬಾದ್ ಶೈಲುಗೌಡ ಪೂಜೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ‌ ಮುಖಂಡರಾದ ರಾಜು ಕಪನೂರ, ಆನಂದ ಟೈಗರ, ಸುರೇಶ ಕೊರವಿ, ರಮೇಶ ಪಡಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

ADVERTISEMENT

ಕಲಬುರಗಿ, ಬೀದರ್ ಜಿಲ್ಲೆಗಳ ವಿವಿಧ ತಾಲ್ಲೂಕುಗಳ ಶಬರಿ ಮಾಲಾಧಾರಿಗಳ ಆಶ್ರಮದ ಸ್ವಾಮಿಗಳು, ಪಟ್ಟಣದ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.