ADVERTISEMENT

ಬನ್ನಿ ಬಸವೇಶ್ವರ ಜಾತ್ರೆ, ತುಲಾಭಾರ ಸೇವೆ

​ಪ್ರಜಾವಾಣಿ ವಾರ್ತೆ
Published 5 ಮೇ 2022, 3:04 IST
Last Updated 5 ಮೇ 2022, 3:04 IST
ಜೇವರ್ಗಿ ತಾಲ್ಲೂಕಿನ ಗಂವ್ಹಾರ ಗ್ರಾಮದ ಬನ್ನಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡ ಧಾರ್ಮಿಕ ಸಭೆಯಲ್ಲಿ ಚನ್ನಪ್ಪಗೌಡ ಪಾಟೀಲ ಬಸಂತ್ರಗೋಳ ದಂಪತಿಗಳಿಂದ ಶ್ರೀಗಳಿಗೆ ನಾಣ್ಯಗಳ ತುಲಾಭಾರ ಸೇವೆ ನಡೆಯಿತು
ಜೇವರ್ಗಿ ತಾಲ್ಲೂಕಿನ ಗಂವ್ಹಾರ ಗ್ರಾಮದ ಬನ್ನಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡ ಧಾರ್ಮಿಕ ಸಭೆಯಲ್ಲಿ ಚನ್ನಪ್ಪಗೌಡ ಪಾಟೀಲ ಬಸಂತ್ರಗೋಳ ದಂಪತಿಗಳಿಂದ ಶ್ರೀಗಳಿಗೆ ನಾಣ್ಯಗಳ ತುಲಾಭಾರ ಸೇವೆ ನಡೆಯಿತು   

ಜೇವರ್ಗಿ: ‘ಪವಾಡ ಪುರುಷ ಸದ್ಗುರು ವಿಶ್ವಾರಾಧ್ಯರು ತಮ್ಮ ಜೀವನದುದ್ದಕ್ಕೂ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಶ್ರೇಷ್ಠ ಸಂತರಾಗಿದ್ದಾರೆ’ ಎಂದು ಅಬ್ಬೇತುಮಕೂರಿನ ಸದ್ಗುರು ವಿಶ್ವಾರಾಧ್ಯರ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗಂವ್ಹಾರ ಗ್ರಾಮದ ಹೊರವಲಯದಲ್ಲಿರುವ ಬನ್ನಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಗಂಗಾಧರ ಶಿವಾಚಾರ್ಯರಿಗೆ ಭಕ್ತರಾದ ಚನ್ನಪ್ಪಗೌಡ ಪಾಟೀಲ ಬಸಂತ್ರಗೋಳ, ನಿವೃತ್ತ ಕೃಷಿ ಸಹಾಯಕ ಭೀಮಣ್ಣ ಬಿರಾಳ ಅವರಿಂದ ನಾಣ್ಯಗಳಿಂದ ತುಲಾಭಾರ ನೆರವೇರಿಸಿದರು.

ADVERTISEMENT

ಕಲ್ಯಾಣ ಕುಮಾರ ಸಂಗಾವಿ, ಬಸವರಾಜ ಸಾಹು ಅಂಗಡಿ ದಾಸೋಹ ವ್ಯವಸ್ಥೆ ಕಲ್ಪಿಸಿದ್ದರು.

ಮಧ್ಯಾಹ್ನ 2 ಗಂಟೆಗೆ ಅಮೃತೇಶ್ವರ ದೇವಸ್ಥಾನದಿಂದ-ಬನ್ನಿ ಬಸವೇಶ್ವರ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು. ಸಂಜೆ 6.30ಕ್ಕೆ ರಥೋತ್ಸವ ಜರುಗಿತು.

ರಾಮಶೆಟ್ಟೆಪ್ಪ ಸಾಹು ಹುಗ್ಗಿ, ವಿಜಯಕುಮಾರ ಪೊಲೀಸ್ ಪಾಟೀಲ, ನಿಂಗಣ್ಣ ಪೂಜಾರಿ ದೊಡಮನಿ, ಶಿವು ಮಾಸ್ತರ ನಾಯ್ಕಲ್, ಶರಣಗೌಡ ಹಲಕರ್ಟಿ, ದೊಡ್ಡಪ್ಪಗೌಡ ಮಾಲಿಪಾಟೀಲ, ರುದ್ರಮುನಿ ಸ್ಥಾವರಮಠ, ಶಾಂತಯ್ಯ ಗೊಂಬಿಮಠ, ಶಾಂತಯ್ಯ ಸ್ಥಾವರಮಠ, ಚನ್ನಪ್ಪ ಅಂಗಡಿ, ಕಾಶಿರಾಯಗೌಡ ಯಲಗೋಡ, ಬಸವರಾಜಗೌಡ ಮಾಲಿಪಾಟೀಲ, ಮಲ್ಲಿಕಾಜುನ ಆದವಾನಿ, ಸಾಯಬಣ್ಣ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.