ADVERTISEMENT

ಕಲಬುರ್ಗಿ: ಬಂದ್ ಬೆಂಬಲಿಸಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 3:04 IST
Last Updated 8 ಡಿಸೆಂಬರ್ 2020, 3:04 IST
   

ಕಲಬುರ್ಗಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಕರೆ ನೀಡಿರುವ ಭಾರತ ಬಂದ್ ಅಂಗವಾಗಿ ವಿವಿಧ ರೈತ ಸಂಘಟನೆಗಳ ಮುಖಂಡರು ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ‌ಬೆಳಿಗ್ಗೆ ‌ಪ್ರತಿಭಟನೆ ನಡೆಸಿದರು.

ಬೇರೆ ಜಿಲ್ಲೆಗಳಿಗೆ ತೆರಳುವ ಬಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ನಗರದಲ್ಲಿ ವಾಹ‌ನ ಸಂಚಾರ ವಿರಳವಾಗಿದ್ದು, ಸಿಟಿ ಬಸ್ ಸೇವೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಅಲ್ಲಲ್ಲಿ ಆಟೊಗಳು‌ ಸಂಚರಿಸುತ್ತಿವೆ.

ADVERTISEMENT

ಬಸ್ ನಿಲ್ದಾಣದಿಂದ ಪ್ರತಿಭಟನೆ ನಡೆಸಲಿರುವ ಪ್ರತಿಭಟನಾಕಾರರು ಅಲ್ಲಿಂದ ಸರ್ದಾರ್ ವಲ್ಲಭಭಾಯಿ ‌ಪಟೇಲ್ ವೃತ್ತ, ಜಗತ್ ವೃತ್ತದ ಮೂಲಕ ಸೂಪರ್ ಮಾರ್ಕೆಟ್ ‌ತಲುಪಲಿದ್ದಾರೆ.

ಭಾರತ ಬಂದ್‌ಗೆ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಎಂ, ಎಸ್ ಯುಸಿಐ ಕಮ್ಯುನಿಸ್ಟ್, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕರ ಸಂಘಟನೆ, ದಲಿತ‌ ಸಂಘರ್ಷ ‌ಸಮಿತಿ ಸೇರಿದಂತೆ ಹಲವು ‌ಪ್ರಗತಿಪರ, ದಲಿತ, ಮಹಿಳಾ ‌ಸಂಘಟನೆಗಳು ಬೆಂಬಲ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.