ಕಲಬುರಗಿ: ಶೋಷಿತರು, ದಲಿತರು ಹಾಗೂ ದುಡಿಯುವ ವರ್ಗದ ಜನರು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಆಡಳಿತ ವರ್ಗದ ಆಯಕಟ್ಟಿನ ಸ್ಥಾನಕ್ಕೆ ಏರದ ಹೊರತು ತಮ್ಮ ಹಿತಕಾಯುವ ನೀತಿ ನಿರೂಪಣೆ ಮಾಡುವುದು ಸುಲಭವಲ್ಲ. ಈ ಅವಕಾಶ ಕೈಗೂಡಬೇಕಾದರೆ ಜ್ಞಾನವೇ ಶಕ್ತಿ ಎಂಬುದನ್ನು ಅರಿಯಬೇಕಿದೆ ಎಂದು ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಶಿವಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಜಾಗೃತ ಜನವೇದಿಕೆ ರಾಜ್ಯ ಸಮಿತಿ ಭೀಮಾ ಕೋರೆಗಾಂವ್ 207ನೇ ಶೌರ್ಯ ದಿನ ಆಚರಣೆ ಪ್ರಯುಕ್ತ ‘ಹುತಾತ್ಮರ ಸ್ಮರಣೆ: ನಮ್ಮ ಹೊಣೆ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಎನ್‌ಎಸ್‌ಎಸ್ ವಿಭಾಗೀಯ ಅಧಿಕಾರಿ ಚಂದ್ರಶೇಖರ ದೊಡ್ಡಮನಿ ಮಾತನಾಡಿದರು. ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಚಿಂತಕ ಬಸವರಾಜ ಹೇರೂರ್, ಪಬ್ಲಿಕ್ ಪ್ರಾಸಿಕ್ಯೂಟರ್ ರಾಜಮಹೇಂದ್ರ ಕಿರಣಗಿ, ಎಂಜಿನಿಯರ್ ನಾಗಮೂರ್ತಿ ಶೀಲವಂತ, ಕಮಲಾಪುರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ ಹಾಗೂ ಉಪನ್ಯಾಸಕ ವಿಜಯಕುಮಾರ್ ಸಾಲಿಮನಿ, ನಿವೃತ್ತ ಡಿವೈಎಸ್ಪಿ ವಿಜಯಕುಮಾರ್ ಹೊಸಮನಿ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಸಿದ್ಧಾರ್ಥ ಚಿಮ್ಮಾಇದಲಾಯಿ ಹಾಗೂ ಶ್ರೀಧರ ಕ್ರಾಂತಿ ಗೀತೆಗಳನ್ನು ಪ್ರಸ್ತುತಗೊಳಿಸಿದರು. ಜನವೇದಿಕೆ ಖಜಾಂಚಿ ಎ.ಬಿ.ಪಟೇಲ್ ಸೊನ್ನ ಸ್ವಾಗತಿಸಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಎಸ್.ಗೌರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಜಶೇಖರ ಹಣಕುಣಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಂಬಾಜಿ ಮೇಟಿ ವಂದಿಸಿದರು.
ಬಸವರಾಜ ಶಿವಕೇರಿ, ಯಶವಂತ ಶಿಂಧೆ, ಹಣಮಂತ ಬೋಧನಕರ್, ಕೆ.ಎಸ್.ಬಂಧು ಸಿದ್ದೇಶ್ವರ, ದಯಾನಂದ ದೊಡ್ಮನಿ, ಸುರೇಶ್ ಬಡಿಗೇರ, ಡಾ.ವಿಜಯಕುಮಾರ್ ಹೆಬ್ಬಾಳಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.