ADVERTISEMENT

ಕೇಬಲ್ ಕಡಿತ: ಕಲಬುರ್ಗಿ ಜಿಲ್ಲೆಯಾದ್ಯಂತ ಬಿಸ್ಸೆನ್ನೆಲ್ ಸೇವೆ ಸಂಪೂರ್ಣ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 6:44 IST
Last Updated 15 ಅಕ್ಟೋಬರ್ 2020, 6:44 IST
   

ಕಲಬುರ್ಗಿ: ಮಂಗಳವಾರ ರಾತ್ರಿ‌ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ವಿವಿಧೆಡೆ ‌ಕೇಬಕ್ ಕಡಿತವಾಗಿದ್ದು, ಸರ್ವರ್ ಸ್ತಬ್ದಗೊಂಡಿದೆ.

ಬುಧವಾರ ಬೆಳಿಗ್ಗೆಯಿಂದಲೇ ಸ್ಥಿರ ದೂರವಾಣಿ, ಮೊಬೈಲ್ ಸೇವೆಗಳು ಸ್ಥಗಿತಗೊಂಡಿದ್ದು, ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆ.

ಗುರುವಾರ (ಅ 15) ಸಂಜೆ ‌ನಾಲ್ಕು ಗಂಟೆ ವೇಳೆಗೆ ಸರ್ವರ್ ಸಂಪರ್ಕ ಮರುಸ್ಥಾಪನೆಗೊಳ್ಳಲಿದೆ ಎಂದು ಬಿಸ್ಸೆನ್ನೆಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಇಲ್ಲಿನ ‌ಸೂಪರ್ ಮಾರ್ಕೆಟ್ ರಸ್ತೆಯಲ್ಲಿರುವ ಬಿಸ್ಸೆನ್ನೆಲ್ ಗ್ರಾಹಕ ಕೇಂದ್ರದ‌ ಬಳಿ ಗ್ರಾಹಕರು ಜಮಾಯಿಸಿದ್ದು, ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.