ADVERTISEMENT

ಚಿಂಚೋಳಿ: ಶವ ಸಾಗಿಸಲು ಹಾದಿಯಿಲ್ಲದೆ ಪರದಾಟ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 3:20 IST
Last Updated 8 ಸೆಪ್ಟೆಂಬರ್ 2021, 3:20 IST
ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ವೃದ್ಧೆಯೊಬ್ಬರ ಶವ ಸಾಗಿಸಲು ಹಳ್ಳದಲ್ಲಿ ಪರದಾಡಿದ ಗ್ರಾಮಸ್ಥರು
ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ವೃದ್ಧೆಯೊಬ್ಬರ ಶವ ಸಾಗಿಸಲು ಹಳ್ಳದಲ್ಲಿ ಪರದಾಡಿದ ಗ್ರಾಮಸ್ಥರು   

ಚಿಂಚೋಳಿ: ಇಲ್ಲಿನ ಗಾರಂಪಳ್ಳಿ ಗ್ರಾಮದಲ್ಲಿ ಮಳೆಗಾಲದ ವೇಳೆ ಅಂತ್ಯಸಂಸ್ಕಾರಕ್ಕೆ ಶವ ಸಾಗಿಸಲು ಗ್ರಾಮಸ್ಥರು ಪರದಾಡುವಂತೆ ಆಗಿದೆ.

ಗ್ರಾಮದ ಪರಿಶಿಷ್ಟ ಜಾತಿ, ಎಡ ಬಲ ವರ್ಗದ ಮೃತರ ಅಂತ್ಯಕ್ರಿಯೆಗೆ ಗೌಡನಹಳ್ಳಿ ಹಾದಿ ವ್ಯಾಪ್ತಿಯಲ್ಲಿ ಸ್ಥಳ ಗೊತ್ತುಪಡಿಸಲಾಗಿದೆ. ಈ ಮಾರ್ಗದಲ್ಲಿ ಹರಿಯುವ ಹಳ್ಳಕ್ಕೆ ಸೇತುವೆ ಇಲ್ಲ. ಹೀಗಾಗಿ, ಮಳೆಗಾಲದಲ್ಲಿ ಹಳ್ಳದಿಂದ ಶವ ಹೊತ್ತು ಸಾಗಲು ಗ್ರಾಮಸ್ಥರು ಪರದಾಡುವಂತಿದೆ.

ಕೋಲಿ, ಕುರುಬ, ಭೋವಿ, ಸೇರಿದಂತೆ ಇತರೆ ಸಮುದಾಯದ ಜನರ ಅಂತ್ಯಕ್ರಿಯೆಗೂ ಇಂತಹದ್ದೆ ಸಮಸ್ಯೆ ಇದೆ. ಈ ಭಾಗದಲ್ಲಿ ಸೇತುವೆ ನಿರ್ಮಿಸಿದರೆ ಅಂತ್ಯಕ್ರಿಯೆಗೆ ಶವ ಹೊತ್ತು ಸಾಗಲು ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮದ ಮುಖಂಡ ಸಂಜೀವಕುಮಾರ.

ADVERTISEMENT

ರುದ್ರಭೂಮಿಯ ದಾಖಲೆಪತ್ರ ಲಗತ್ತಿಸಿ ಕಚೇರಿಗೆ ಅರ್ಜಿ ಸಲ್ಲಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.