ADVERTISEMENT

ಕಲ್ಲೂರು ರೋಡ್: ಉರಡೆಮ್ಮ, ಮಾತಂಗಿಯ ದೇವಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 4:56 IST
Last Updated 4 ಫೆಬ್ರುವರಿ 2026, 4:56 IST
ಚಿಂಚೋಳಿ ತಾಲ್ಲೂಕಿನ ಕಲ್ಲೂರು ರೋಡ ಗ್ರಾಮದಲ್ಲಿ ಗ್ರಾಮ ದೇವತೆ ಉರುಡೆಮ್ಮ ದೇವಿಯ ನೂತನ ದೇವಾಲಯ ಉದ್ಘಾಟನೆಯಲ್ಲಿ ಹಿರಿಯರಾದ ಮಧುಸೂಧನರೆಡ್ಡಿ ಪಾಟೀಲ ನೇತೃತ್ವದಲ್ಲಿ ಚೆಟ್ಟಿನಾಡ ಕಂಪನಿ ಜಂಟಿ ಅಧ್ಯಕ್ಷ ಎನ್.ರವಿಕುಮಾರ, ಎವಿಪಿ ಶೇಖರಬಾಬು ಪುನೂರಿ ಪಾಲ್ಗೊಂಡರು
ಚಿಂಚೋಳಿ ತಾಲ್ಲೂಕಿನ ಕಲ್ಲೂರು ರೋಡ ಗ್ರಾಮದಲ್ಲಿ ಗ್ರಾಮ ದೇವತೆ ಉರುಡೆಮ್ಮ ದೇವಿಯ ನೂತನ ದೇವಾಲಯ ಉದ್ಘಾಟನೆಯಲ್ಲಿ ಹಿರಿಯರಾದ ಮಧುಸೂಧನರೆಡ್ಡಿ ಪಾಟೀಲ ನೇತೃತ್ವದಲ್ಲಿ ಚೆಟ್ಟಿನಾಡ ಕಂಪನಿ ಜಂಟಿ ಅಧ್ಯಕ್ಷ ಎನ್.ರವಿಕುಮಾರ, ಎವಿಪಿ ಶೇಖರಬಾಬು ಪುನೂರಿ ಪಾಲ್ಗೊಂಡರು   

ಚಿಂಚೋಳಿ: ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ವತಿಯಿಂದ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ₹30 ಲಕ್ಷ ವೆಚ್ಚ ಮಾಡಿ ನಿರ್ಮಿಸಿದ ಗ್ರಾಮ ದೇವತೆ ನೂತನ ದೇವಾಲಯ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಮಂಗಳವಾರ ಭಕ್ತಿಶ್ರದ್ಧೆಯಿಂದ ನಡೆಯಿತು.

ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಮೂರು ದಿನಗಳಿಂದ ಧಾರ್ಮಿಕ ವಿಧಿ ವಿಧಾನಗಳು ನಡೆಸಿದ ತಾಂಡೂರಿನ ಅರ್ಚಕರಾದ ರಾಘವೇಂದ್ರ ಅವರ ನೇತೃತ್ವದಲ್ಲಿ ಮಂಗಳವಾರ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ ಕೈಂಕರ್ಯಗಳು ಕೈಗೊಳ್ಳಲಾಯಿತು.

ತೆಲಂಗಾಣದ ಮಹಿಬೂಬನಗರದ ಶಿಲ್ಪಿಗಳು ತಯಾರಿಸಿದ ನೂತನ ದೇವಿಯ ಮೂರ್ತಿಗಳನ್ನು ಗ್ರಾಮಕ್ಕೆ ತಂದು ಮೆರವಣಿಗೆ ಮೂಲಕ ಗ್ರಾಮ ಪ್ರದಕ್ಷಿಣೆ ಮತ್ತು ಪುರ ಪ್ರವೇಶ ನಡೆಸಿದ ಭಕ್ತರು, ನಂತರ ಮೂರ್ತಿಗಳನ್ನು ಒಂದು ದಿನ ನೀರಿನಲ್ಲಿ, ಮತ್ತೊಂದು ದಿನ ಅಕ್ಕಿಯಲ್ಲಿ ಮರುದಿನ ಹಣ್ಣಿನಲ್ಲಿ ಇರಿಸಿ ಮಂಗಳವಾರ ನಸುಕಿನಲ್ಲಿ ಹೋಮ, ಅಭಿಷೇಕ ಕೈಗೊಂಡು ಮಂತ್ರ ಘೋಷಗಳೊಂದಿಗೆ ಮೂರ್ತಿ ಪ್ರತಿಷ್ಠಾಪಿಸಿ ಜತೆಗೆ ಕಳಸಾರೋಹಣ ನಡೆಸಿದರು.

ADVERTISEMENT

ಮಂಗಳವಾರ ಬೆಳಿಗ್ಗೆ ಗ್ರಾಮದ ಮುಖಂಡರಾದ ಮಧುಸೂಧನರೆಡ್ಡಿ ಪಾಟೀಲ, ವೀರಾರೆಡ್ಡಿ ಪಾಟೀಲ, ತಾ.ಪಂ ಮಾಜಿ ಸದಸ್ಯ ಜಗನ್ನಾಥ ಈದಲಾಯಿ, ಮುಖಂಡ ಚಂದ್ರು ಜೊನ್ನಲ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಕಂಪನಿಯ ಜಂಟಿ ಅಧ್ಯಕ್ಷ ಎನ್. ರವಿಕುಮಾರ, ಎವಿಪಿ ಪುನೂರಿ ಶೇಖರಬಾಬು ಉದ್ಘಾಟಿಸಿದರು.

ಹಣಮಂಯ್ಯ ಸುಂಠಾಣ, ಶರಣಪ್ಪ ಊರಡಿ, ಹಣಮಂತ ಭೋಯಿನ್, ನಾಗರಾಜ ಸೇವತಕರ್, ಇಲಿಯಾಸ್, ರಾಘವೇಂದ್ರ ಗುತ್ತೇದಾರ, ಝರಣಪ್ಪ ಪೂಜಾರಿ, ಜಗನ್ನಾಥ ಮ್ಯಾಕಲ್, ಗೋಪಾಲರೆಡ್ಡಿ, ಮಹಿಪಾಲರೆಡ್ಡಿ, ಶ್ರೀಶೈಲಂ ಹೋಟೆಲ್, ಜಗದೀಶ ಸಜ್ಜನ್, ವಿಶ್ವನಾಥ ಈದಲಾಯಿ, ವಿಜಯಕುಮಾರ ಪರೀಟ್, ಶಾಂತಕುಮಾರ ಪಲ್ಲೇದ್, ವೀರಪ್ಪ ರಾಯಪಳ್ಳಿ, ನರೇಶ ಗೌಡ, ಬಸವರಾಜ ಕಾಂಟಲಿ, ಅಣವೀರಪ್ಪ ಕಾಂಟಲಿ, ಸುದರ್ಶನರೆಡ್ಡಿ ಶೇರಿ, ನಾಗೇಂದ್ರ ಸುಂಠಾಣ, ಮಹಾದೇವ ಡಪ್ಪಿನ್, ಮಂಜುನಾಥ ಭೋವಿ, ಝರಣಪ್ಪ ಸೂರವಾರ, ಆನಂದ ಮೇತ್ರೆ. ಕಂಪನಿಯ ಸಂದೀಪರೆಡ್ಡಿ, ಭೀಮರೆಡ್ಡಿ, ಪ್ರಭಾಕರರೆಡ್ಡಿ ಮೊದಲಾದವರು ಇದ್ದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಕಂಪನಿ

ಗ್ರಾಮಸ್ಥರು ದೇವಾಲಯ ನಿರ್ಮಿಸುವಂತೆ ಚೆಟ್ಟಿನಾಡ ಕಂಪನಿ ಮನವಿ ಮಾಡಿಕೊಂಡಿದ್ದರು. ಅದರಂತೆ ಮನವಿಗೆ ಸ್ಪಂದಿಸಿ ಎರಡು ಹಂತದಲ್ಲಿ ಒಟ್ಟು ₹30 ಲಕ್ಷ ಮಂಜೂರು ಮಾಡಿ ಕಂಪನಿ ವ್ಯವಸ್ಥಾಪಕ ನಿರ್ದೆಶಕ ಮುತ್ತಯ್ಯ ರಾಮಸ್ವಾಮಿ ಸಿಒಒ ಕೃಷ್ಣಕುಮಾರ ಆರ್. ಕಂಪನಿ ಕಾರ್ಯದರ್ಶಿ ಹರಿಹರನ್ ನಿರ್ವಹಣೆ ಮುಖ್ಯಸ್ಥರಾದ ಜಿ.ವಿ.ರಾಮಕೃಷ್ಣ ಕಂಪನಿ ಎಚ್ಆರ್ ಮುಖ್ಯಸ್ಥರಾದ ಎಂ.ಪ್ರಭು ದೇವಾಲಯ ನಿರ್ಮಿಸಿಕೊಟ್ಟಿದ್ದಾರೆ. ಗ್ರಾಮ ದೇವತೆಯ ಉತ್ಸವ ಫೆ.20 ರಿಂದ 22ವರೆಗೆ ಮೂರು ದಿನಗಳ ಕಾಲ ಗ್ರಾಮ ದೇವತೆಯ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಪ್ರಯುಕ್ತ ಗ್ರಾಮದಲ್ಲಿ ಪಾಪ ತೊಳೆದ ಪುಣ್ಯವತಿ ಸಾಮಾಜಿಕ ನಾಟಕ ಅಭಿನಯ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸುದರ್ಶನರೆಡ್ಡಿ ಪಾಟೀಲ ನೇತೃತ್ವದಲ್ಲಿ ಪುಸ್ತಕ ಪೂಜೆ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.