
ಪ್ರಜಾವಾಣಿ ವಾರ್ತೆಕಲಬುರಗಿ: ಜಿಲ್ಲೆಯ ಅಫಲಪುರದ ಕಾಂಗ್ರೆಸ್ ಮುಖಂಡ ಮತಿನ್ ಪಟೇಲ್ ಕೈಯಲ್ಲಿ ಪಿಸ್ತೂಲ್ ಹಿಡಿದು ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಕೈ’ ಮುಖಂಡನ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಮತಿನ್ ಪಟೇಲ್ ಹಿಂದಿ ಚಲನಚಿತ್ರದ ಗೀತೆ ಧುರಂಧರ್ ಹಾಡಿಗೆ ಹೆಜ್ಜೆಹಾಕಿರುವುದು ವಿಡಿಯೊದಲ್ಲಿದೆ. ಕಲಬುರಗಿ ನಗರದ ಬಾಂಬೂ ಬಜಾರ್ ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಇದನ್ನು ಚಿತ್ರಿಕರಿಸಲಾಗಿದೆ ಎನ್ನಲಾಗಿದೆ.
ಮತಿನ್ ಪಟೇಲ್ ಅಫಜಲಪುರದ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ ಆಪ್ತರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೂ ಹೌದು.
‘ಈ ಕುರಿತು ವಿಚಾರಣೆ ಪ್ರಗತಿಯಲ್ಲಿದ್ದು, ಈತನಕ ಪ್ರಕರಣ ದಾಖಲಾಗಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.