ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಬಹುಮತ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 7 ಮೇ 2024, 13:53 IST
Last Updated 7 ಮೇ 2024, 13:53 IST
<div class="paragraphs"><p>ಕಲಬುರಗಿಯಲ್ಲಿ ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪತ್ನಿ ರಾಧಾಬಾಯಿ ಖರ್ಗೆ, ಶಾಸಕ ಅಲ್ಲಪ್ರಭು ಪಾಟೀಲ ಮತದಾನದ ಬಳಿಕ ಕೈಬೆರಳಿಗೆ ಶಾಹಿ ಗುರುತು ಹಾಕಿರುವುದನ್ನು ಪ್ರದರ್ಶಿಸಿದರು</p></div>

ಕಲಬುರಗಿಯಲ್ಲಿ ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪತ್ನಿ ರಾಧಾಬಾಯಿ ಖರ್ಗೆ, ಶಾಸಕ ಅಲ್ಲಪ್ರಭು ಪಾಟೀಲ ಮತದಾನದ ಬಳಿಕ ಕೈಬೆರಳಿಗೆ ಶಾಹಿ ಗುರುತು ಹಾಕಿರುವುದನ್ನು ಪ್ರದರ್ಶಿಸಿದರು

   

ಕಲಬುರಗಿ: ‘ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಬ್ರಹ್ಮಪುರ ಬಡಾವಣೆಯ ಬಸವನಗರ ಮತಗಟ್ಟೆಯಲ್ಲಿ ಮಂಗಳವಾರ ಪತ್ನಿ ರಾಧಾಬಾಯಿ ಖರ್ಗೆ ಅವರೊಂದಿಗೆ ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ADVERTISEMENT

‘ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಎಲ್ಲೆಡೆಯಿಂದಲೂ ಒಳ್ಳೆಯ ವರದಿಗಳು ಬರುತ್ತಿವೆ. ಮೂರನೇ ಹಂತದ ಮತದಾನದಲ್ಲಿ ‘ಇಂಡಿಯಾ’ ಒಕ್ಕೂಟದ ಪಕ್ಷಗಳಿಗೆ ಜನರಿಂದ ಒಳ್ಳೆಯ ರೀತಿಯ ಬೆಂಬಲವೂ ವ್ಯಕ್ತವಾಗಿದೆ. ಇದರಿಂದ ‘ಇಂಡಿಯಾ’ ಒಕ್ಕೂಟದ ಮಿತ್ರ ಪಕ್ಷಗಳು ಹೆಚ್ಚಿನ ಬಲ ಪಡೆದುಕೊಳ್ಳುತ್ತಿವೆ. ಈ ಚುನಾವಣೆಯನ್ನು ಬಹಳಷ್ಟು ಜನರು ಕುತೂಹಲದಿಂದ ನೋಡುತ್ತಿದ್ದು, ಜನರಿಂದಲೂ ನಾವು ಉತ್ತಮ ಬೆಂಬಲ ಗಳಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.