ADVERTISEMENT

ಕೊರೊನಾ ಲಾಕ್‌ಡೌನ್: ಜನರ ಓಡಾಟ ತಡೆಗೆ ದಂಡ ಹಿಡಿದ ತಹಶೀಲ್ದಾರ್!

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 16:45 IST
Last Updated 25 ಮಾರ್ಚ್ 2020, 16:45 IST
   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಕೊರೊನಾ ಸೋಂಕು ಹರಡುವುದು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಘೊಷಿಸಿದ 21 ದಿನ ಇಡಿ ದೇಶವೇ ಲಾಕ್ ಡೌನ್ ಮಾಡಿದರೂ ತಾಲ್ಲೂಕಿನಲ್ಲಿ ಅಲ್ಲಲಿ ಜನರ ಓಡಾಟ ಕಾಣಿಸುತ್ತಿದೆ. ಇದರ ನಿಯಂತ್ರಣಕ್ಕೆ ಸಂಕಲ್ಪ ತೊಟ್ಟಿರುವ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರು ಸ್ವತ ಲಾಠಿ ಕೈಗೆತ್ತಿಕೊಂಡು ಓಡಾಡಿದರು.

ಮಿರಿಯಾಣ, ಕುಂಚಾವರಂ ಮತ್ತು ಕೊಳ್ಳೂರು ಕ್ರಾಸ್ ಅಂತರ ರಾಜ್ಯ ಗಡಿಯಲ್ಲಿ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಚೆಕ್ ಪೋಸ್ಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಿ ಜನರನ್ನು ಚದುರಿಸಿದರು.‌

ಪಿಎಸ್ಐ ರಾಜಶೇಖರ ರಾಠೋಡ, ವಿಶ್ವನಾಥ ಮುದರೆಡ್ಡಿ, ಸಂತೋಷ ರಾಠೋಡ ಮೊದಲಾದವರು ಇದ್ದರು.

ADVERTISEMENT

ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ವಿಚಾರಿಸಿ ಪೊಲೀಸರು ದಂಡ ಬೀಸುವ ಮೂಲಕ ಯುಗಾದಿಯ ಬೆಲ್ಲದ ಬದಲಿಗೆ ಬೇವು ಉಣಬಡಿಸುತ್ತಿರುವುದು ಕಾಣಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.