ADVERTISEMENT

ತೊಟ್ನಳ್ಳಿ: ದುರ್ಗಾದೇವಿ ಜಾತ್ರೆ ನಾಳೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 7:31 IST
Last Updated 2 ಜನವರಿ 2026, 7:31 IST
ತ್ರಿಮೂರ್ತಿ ಶಿವಾಚಾರ್ಯ
ತ್ರಿಮೂರ್ತಿ ಶಿವಾಚಾರ್ಯ   

ಸೇಡಂ: ತಾಲ್ಲೂಕಿನ ತೊಟ್ನಳ್ಳಿ ಗ್ರಾಮದ ಹೊರವಲಯದಲ್ಲಿರುವ ದುರ್ಗಾದೇವಿ ಜಾತ್ರಾ ಮಹೋತ್ಸವವು ಜ.3 ರಂದು ನಡೆಯಲಿದೆ ಎಂದು ತೊಟ್ನಳ್ಳಿ ಮಹಾಂತೇಶ್ವರ ಮಠದ ತ್ರಿಮುರ್ತಿ ಶಿವಾಚಾರ್ಯ ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವವು ಜ.2 ರಂದು ಸಂಜೆ 5 ಗಂಟೆಗೆ ತೊಟ್ನಳ್ಳಿ ಮಹಾಂತೇಶ್ವರ ಮಠದಿಂದ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ ದುರ್ಗಾದೇವಿ ದೇವಾಲಯದವರೆಗೆ ಉತ್ಸವ ಮೂರ್ತಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಮೀನಹಾಬಾಳ, ಮಂಗಲಗಿ, ಬಿಜನಳ್ಳಿ, ಸಂಗಾವಿ(ಎಂ), ಬೀರನಳ್ಳಿ, ಕುಕ್ಕುಂದಾ, ಯಡಗಾ, ಬಿಬ್ಬಳ್ಳಿ ನೀಲಹಳ್ಳಿ, ಮಳಖೇಡ, ಮಲಕೂಡ, ತೊಬನಸನಳ್ಳಿ, ಟೆಂಗಳಿ, ಸಾಲೊಳ್ಳಿ ಹಾಗೂ ಕೊಡದೂರ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರಿಂದ ರಾತ್ರಿ ಭಜನೆ ನಡೆಯಲಿದೆ.

ಜ.3 ರಂದು ಬೆಳಿಗ್ಗೆ 6.30 ನಿಮಿಷಕ್ಕೆ ದುರ್ಗಾದೇವಿ ವಿಗ್ರಹಕ್ಕೆ ರುದ್ರಾಭಿಷೇಕ, ನಂತರ 8 ಗಂಟೆಯಗೆ ಕನ್ಯೆ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 2.45 ನಿಮಿಷಕ್ಕೆ ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ಜರುಗಲಿದೆ. ಜೊತೆಗೆ ಸೇಡಂ ನುರಿತ ತಜ್ಞವೈದ್ಯರ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಲಿದೆ. ನಂತರ ರಾತ್ರಿ 9 ಗಂಟೆಗೆ ರೇಣುಕಾ ಮಹಾತ್ಮೆ ಬಯಲಾಟ ಸಂಘದಿಂದ ಬಯಲಾಟ ಪ್ರದರ್ಶನಗೊಳ್ಳಲಿದೆ.

ADVERTISEMENT

ಜಾತ್ರಾ ಮಹೋತ್ಸವದಲ್ಲಿ ಸೇಡಂನ ಶಿವಶಂಕರ ಶಿವಾಚಾರ್ಯ, ಮಂಗಲಗಿ ಶಾಂತಸೋಮನಾಥ ಶಿವಾಚಾರ್ಯ, ಮಳಖೇಡ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಕೊಟ್ಟೂರೇಶ್ವರ ಶಿವಾಚಾರ್ಯ, ಪಂಚಾಕ್ಷರಿ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಚಿಕ್ಕಶಿವಲಿಂಗೇಶ್ವರ ದೇವರು, ಉಮೇಶ್ವರ ದೇವರು, ಚನ್ನವೀರ ಮುತ್ಯಾ, ಸಿದ್ದಯ್ಯ ಮುತ್ಯಾ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.