ADVERTISEMENT

ಸಿದ್ಧಸಿರಿ ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ; ಚಾಲಕ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 8:24 IST
Last Updated 27 ನವೆಂಬರ್ 2025, 8:24 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಚಿಂಚೋಳಿ (ಕಲಬುರಗಿ): ಪಟ್ಟಣದ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಘಟಕದ ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ದುರ್ಘಟನೆಯಲ್ಲಿ ಟ್ಯಾಂಕರ್ ಸುಟ್ಟು ಹೋಗಿದ್ದು ಚಾಲಕ ಸಜೀವ ದಹನವಾದ ಘಟನೆ ತೆಲಂಗಾಣದ ಹನ್ನವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಲಿಗುಂಡು ಗ್ರಾಮದ ಸಮೀಪ ಬುಧವಾರ ತಡರಾತ್ರಿ 11.30ರ ಸುಮಾರಿಗೆ ಸಂಭವಿಸಿರುವುದು ವರದಿಯಾಗಿದೆ.

ಮೃತ ಚಾಲಕನನ್ನು ತಾಲ್ಲೂಕಿನ ಹೂಡದಳ್ಳಿ ಗ್ರಾಮದ ನಿರಂಜನ ಜಮಾದಾರ (30) ಎಂದು ಗುರುತಿಸಲಾಗಿದೆ. ಮೃತ‌ ನಿರಂಜನಗೆ ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ADVERTISEMENT

ಚಿಂಚೋಳಿಯಿಂದ ಎಥೆನಾಲ್ ತುಂಬಿದ್ದ ಟ್ಯಾಂಕರ್ ಅಪಘಾತಕ್ಕಿಡಾಗಿದೆ. ಈ ಕುರಿತು ತೆಲಂಗಾಣದ ಮಹಿಬೂಬ ನಗರ ಬಳಿಯ ಅನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.