ADVERTISEMENT

ಕಲಬುರಗಿ: ಕೋವಿಡ್‌ ಸೇನಾನಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 3:32 IST
Last Updated 23 ಅಕ್ಟೋಬರ್ 2021, 3:32 IST
ಕಲಬುರಗಿಯ ಬಿಜೆಪಿ ಉತ್ತರ ಮಂಡಲದಲ್ಲಿನ ದುಬೈ ಕಾಲೊನಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ಸೇನಾನಿಗಳನ್ನು ಸನ್ಮಾನಿಸಲಾಯಿತು
ಕಲಬುರಗಿಯ ಬಿಜೆಪಿ ಉತ್ತರ ಮಂಡಲದಲ್ಲಿನ ದುಬೈ ಕಾಲೊನಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ಸೇನಾನಿಗಳನ್ನು ಸನ್ಮಾನಿಸಲಾಯಿತು   

ಕಲಬುರಗಿ: 100 ಕೋಟಿಗೂ ಹೆಚ್ಚು ಕೋವಿಡ್ ಲಸಿಕಾ ಡೋಸ್‌ಗಳನ್ನು ಜನರಿಗೆ ನೀಡಿ ಭಾರತ ವಿಶ್ವ ದಾಖಲೆ ಮಾಡಿರುವ ಕಾರಣ ಶುಕ್ರವಾರ ಕಲಬುರಗಿ ಬಿಜೆಪಿ ಉತ್ತರ ಮಂಡಲದ ವತಿಯಿಂದ ದುಬೈ ಕಾಲೊನಿಯ ಯುನಾನಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡ, ಸ್ಟಾಫ್ ನರ್ಸ್‌ಗಳು ಮತ್ತು ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ ಮಾತನಾಡಿ, ವೈದ್ಯರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಕೋವಿಡ್ ಸೇನಾನಿಗಳ ಸೇವೆ ಶ್ಲಾಘನೀಯ ಎಂದರು.

ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಅರುಣ ಬಿನ್ನಾಡಿ, ವೈದ್ಯರಾದ ಡಾ.ಸಂಧ್ಯಾರಾಣಿ, ಮಹಾನಗರ ಪಾಲಿಕೆ ಸದಸ್ಯರಾದ ಕೃಷ್ಣ ನಾಯಕ, ಸುನಿಲ ಮಚ್ಚಟ್ಟಿ, ಶಿವಾನಂದ, ಚನ್ನು, ಬಸವರಾಜ ಮುನ್ನಳ್ಳಿ, ಸಂಗು ಮನ್ನಳ್ಳಿ, ಮಲ್ಲಿನಾಥ ಕೊಡ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT