ADVERTISEMENT

ಕನ್ನಡ ಬಾವುಟಕ್ಕೆ ಬೆಂಕಿ: ಕ್ರಮಕ್ಕೆ ಆಗ್ರಹ

ಯಡ್ರಾಮಿ: ಟೈರ್‌ಗೆ ಬೆಂಕಿ ಹಚ್ಚಿ ಕರವೇ ಪದಾಧಿಕಾರಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 5:31 IST
Last Updated 17 ಡಿಸೆಂಬರ್ 2021, 5:31 IST
ನಾಡ ಧ್ವಜಕ್ಕೆ ಅವಮಾನ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಅಲ್ಲಾ ಪಟೇಲ ಅಮರನಾಥ ಸಾಹು, ವಿಶ್ವನಾಥ ಪಾಟೀಲ ಇದ್ದರು
ನಾಡ ಧ್ವಜಕ್ಕೆ ಅವಮಾನ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಅಲ್ಲಾ ಪಟೇಲ ಅಮರನಾಥ ಸಾಹು, ವಿಶ್ವನಾಥ ಪಾಟೀಲ ಇದ್ದರು   

ಯಡ್ರಾಮಿ: ‘ಕರ್ನಾಟಕ ಧ್ವಜವನ್ನು ಸುಟ್ಟು ಹಾಕಿ ಅವಮಾನಗೊಳಿಸಿದ ಶಿವಸೇನೆ ಮತ್ತು ಎಂಇಎಸ್ ಪುಂಡರಿಗೆ ಶೀಘ್ರವಾಗಿ ಸೂಕ್ತ ಕಾನೂನು ಕ್ರಮ ಕೈಗೊಂಡು ಹಾಗೂ ಕನ್ನಡಿಗರ ಮೇಲೆ ಹಾಕಿದ ಕೊಲೆ ಪ್ರಯತ್ನ ಪ್ರಕರಣಗಳನ್ನು ದೋಷಮುಕ್ತಗೊಳಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಪಟ್ಟಣದ ಸರ್ದಾರ ಶರಣಗೌಡ ವೃತ್ತದಿಂದ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾ ಡಾ. ಬಿಆರ್ ಅಂಬೇಡ್ಕರ್ ವೃತ್ತದರೆಗೆ ಬಂದು ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ತಹಶೀಲ್ದಾರ್ ಶಾಂತಗೌಡ ಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ಲಾ ಪಟೇಲ ಇಜೇರಿ,

ADVERTISEMENT

ಕರವೇ ಅಧ್ಯಕ್ಷ ವಿಶ್ವನಾಥ ಪಾಟೀಲ, ತಾಲ್ಲೂಕು ಒಕ್ಕೂಟ ಅಧ್ಯಕ್ಷ ಅಮರನಾಥ ಸಾಹು ಮಾತನಾಡಿದರು.

ಅಫ್ರೋಜ್ ಅತ್ನೂರ, ಬಾಲು ಮಡಿವಾಳಕರ್, ದೇವಾನಂದ ಗುತ್ತೇದಾರ, ಸಿದ್ದು ಕುಕನೂರ, ಮಲ್ಲಯ್ಯ ಕುಕನೂರ, ಕೇಶವ ಪ್ರಸಾದ, ಶಫೀಉಲ್ಲಾ ಧಖನಿ, ಲಾಳೇಸಾಬ ಮನಿಯಾರ, ಈರಣ್ಣ ಭಜಂತ್ರಿ, ನಿಖಿಲ ಅಜ್ಜು, ಮಾಳು ಕಾರಗುಂಡರ, ಶಿವು ತಳವಾರ, ಪ್ರಮೋಧ ದೊರೆ ಸೇರಿದಂತೆ ವಿವಿಧ ಸಂಘಟನೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.