ADVERTISEMENT

ಜೇವರ್ಗಿ | ಸಂತ್ರಸ್ತರಿಗೆ ಕಿಟ್ ವಿತರಿಸಿದ ಅಜಯಸಿಂಗ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 6:37 IST
Last Updated 16 ಸೆಪ್ಟೆಂಬರ್ 2025, 6:37 IST
ಜೇವರ್ಗಿ ಪಟ್ಟಣದಲ್ಲಿ ಸೋಮವಾರ ಸಂತ್ರಸ್ತರಿಗೆ ಶಾಸಕ ಡಾ.ಅಜಯಸಿಂಗ್ ಆಹಾರ ಸಾಮಗ್ರಿ ಕಿಟ್ ವಿತರಣೆ ಮಾಡಿದರು
ಜೇವರ್ಗಿ ಪಟ್ಟಣದಲ್ಲಿ ಸೋಮವಾರ ಸಂತ್ರಸ್ತರಿಗೆ ಶಾಸಕ ಡಾ.ಅಜಯಸಿಂಗ್ ಆಹಾರ ಸಾಮಗ್ರಿ ಕಿಟ್ ವಿತರಣೆ ಮಾಡಿದರು   

ಜೇವರ್ಗಿ : ಅತೀವೃಷ್ಟಿ ಹಾಗೂ ಪ್ರವಾಹದಿಂದ ಸಂಕಷ್ಟಕೀಡಾದ ಪಟ್ಟಣದ ವಿವಿಧ ಬಡಾವಣೆಯ ಜನರಿಗೆ ಆಹಾರ ಸಾಮಗ್ರಿ ಕಿಟ್‌ಗಳನ್ನು ಸೋಮವಾರ ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ವಿತರಣೆ ಮಾಡಿದರು.

ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದ ಹಳ್ಳಕ್ಕೆ ಪ್ರವಾಹ ಬಂದು ಪಟ್ಟಣದ ಜೋಪಡಪಟ್ಟಿ, ಬುಗ್ಗಿ ಬಡಾವಣೆಯ ನೂರಾರು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿತ್ತು. ಸೋಮವಾರ ಶಾಸಕ ಡಾ.ಅಜಯಸಿಂಗ್, 10 ಕೆಜಿ ಅಕ್ಕಿ, ಉಪ್ಪು, ಖಾರದ ಪುಡಿ, ಎಣ್ಣೆ, ಸಾಬೂನು, ಮಸಾಲೆ ಪದಾರ್ಥಗಳ ಸೇರಿದಂತೆ 20 ಕ್ಕೂ ಹೆಚ್ಚು ಸಾಮಗ್ರಿಯುಳ್ಳ ಕಿಟ್‌ಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿದರು.

ಅತೀವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಹಾಗೂ ಮನೆಗಳಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಒದಗಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ADVERTISEMENT

ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಲೋಕೋಪಯೋಗಿ ಇಲಾಖೆ ಎಇಇ ತಜಮುಲ್ಲಾ ಹುಸೇನ್, ಮುಖಂಡರಾದ ರಾಜಶೇಖರ ಸಾಹು ಸೀರಿ, ರುಕುಂ ಪಟೇಲ ಇಜೇರಿ, ಚಂದ್ರಶೇಖರ ಹರನಾಳ, ಪ್ರದೀಪ್ ಕಟ್ಟಿ, ಡಿ.ಕೆ.ಬಡಾಘರ್, ಮೋಹಿಯುದ್ದೀನ್ ಇನಾಮದಾರ, ಇಮ್ರಾನ್ ಕಾಸರಬೋಸಗಾ, ರಫೀಕ್ ಜಮಾದಾರ ಸೇರಿದಂತೆ ಮತ್ತೀತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.