ADVERTISEMENT

ಬಳೂರ್ಗಿ ಗ್ರಾಮ ಪಂಚಾಯಿತಿ: ಅತ್ತೆ– ಸೊಸೆಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 13:32 IST
Last Updated 30 ಡಿಸೆಂಬರ್ 2020, 13:32 IST
ಪ್ರೀತಿ ರಾಠೋಡ ಮತ್ತು ಪಾರುಬಾಯಿ ರಾಠೋಡ
ಪ್ರೀತಿ ರಾಠೋಡ ಮತ್ತು ಪಾರುಬಾಯಿ ರಾಠೋಡ   

ಅಫಜಲಪುರ: ತಾಲ್ಲೂಕಿನ ಬಳೂರ್ಗಿ ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಿದ್ದ ಅತ್ತೆ ಸೊಸೆ ಇಬ್ಬರು ಜಯಗಳಿಸಿದ್ದಾರೆ.

ಬುಧವಾರ ನಡೆದ ಮತ ಎಣಿಕೆಯಲ್ಲಿ ಗ್ರಾಮದ ವಾರ್ಡ್‌ ನಂ–2ರಲ್ಲಿ ಪಾರುಬಾಯಿ ಫಲಾಲಸಿಂಗ್ ರಾಠೋಡ 150 ಮತ ಮತ್ತು ವಾರ್ಡ್‌ ನಂ.1ರಿಂದ ಅವರ ಸೊಸೆ ಪ್ರೀತಿ ಸಂದೀಪ ರಾಠೋಡ 78 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪಾರುಬಾಯಿ ಮತ್ತು ಪ್ರೀತಿ ಮಾತನಾಡಿ, ಮುಂದಿನ 5 ವರ್ಷಗಳಲ್ಲಿ ವಾರ್ಡ್‌ಗಳ ಮೂಲ ಸೌಲಭ್ಯ ಕಲ್ಪಿಸಲು ಕೆಲಸ ಮಾಡುತ್ತೇವೆ. ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.