ADVERTISEMENT

ಆಳಂದ: ವಿವಿಧೆಡೆ ಗುರುಪೂರ್ಣಿಮೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 5:40 IST
Last Updated 22 ಜುಲೈ 2024, 5:40 IST
ಆಳಂದ ತಾಲ್ಲೂಕಿನ ಜಿಡಗಾ ಮಠದಲ್ಲಿ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿಗಳಿಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿ ಸುವರ್ಣ ಕಿರೀಟಧಾರಣೆ ಮಾಡಿದರು
ಆಳಂದ ತಾಲ್ಲೂಕಿನ ಜಿಡಗಾ ಮಠದಲ್ಲಿ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿಗಳಿಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿ ಸುವರ್ಣ ಕಿರೀಟಧಾರಣೆ ಮಾಡಿದರು   

ಆಳಂದ: ‘ಬಡವರು, ಅಸಹಾಯಕ ಹಾಗೂ ರೈತ ಕುಟುಂಬದ ಮಕ್ಕಳಿಗೆ ಶಿಕ್ಷಣದ ಉಚಿತ ಸೌಲಭ್ಯಗಳು ಒದುಗಿಸುವ ಅಕ್ಷರ ದಾಸೋಹವು ಇಂದು ಮಹತ್ವದ ಪುಣ್ಯ ಕಾರ್ಯವಾಗಿದೆ’ ಎಂದು ಜಿಡಗಾ-ಮುಗಳಖೋಡದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಭಾನುವಾರ ಭಕ್ತರಿಂದ ಹಮ್ಮಿಕೊಂಡ ಗುರುಪೂರ್ಣಿಮಾ ಹಾಗೂ ಸುವರ್ಣ ಕಿರೀಟಧಾರಣೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಇದಕ್ಕೂ ಮುನ್ನ ಸಿದ್ದರಾಮ ಶಿವಯೋಗಿಗಳ ಕರ್ತ್ಯು ಗದ್ದುಗೆಗೆ ವಿಶೇಷ ಪೂಜೆಯ ನಡೆಯಿತು. ಬಳಿಕ ಮಠದಲ್ಲಿ ನೂರು ವಿದ್ಯಾರ್ಥಿಗಳಿಗೆ ಸಹಜ ಶೀವಯೋಗದ ಮೂಲಕ ಲಿಂಗಧಾರಣೆ ಕೈಗೊಳ್ಳಲಾಯಿತು. ಭಕ್ತರಿಂದ ಮುರುಘರಾಜೇಂದ್ರ ಸ್ವಾಮೀಜಿಗಳ ಪಾದಪೂಜೆ, ಗುರುವಂದನೆ ನಂತರ ವಿದ್ಯಾರ್ಥಿಗಳು ಹಾಗೂ ಭಕ್ತರ ಸಹಯೋಗದಲ್ಲಿ ಸುವರ್ಣ ಕಿರೀಟ ಧಾರಣೆ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ADVERTISEMENT

ಪ್ರಮುಖರಾದ ರಾಜೇಶ್ವರಿ ವಿಶ್ವನಾಥ ರೆಡ್ಡಿ, ಸಂಗ್ರಾಮ ಬಿರಾದಾರ, ಮುರುಳಿಧರ ಏಕಲಾರಕರ್‌, ರೇವಣಸಿದ್ದಪ್ಪ ನಾಗೂರೆ, ಪ್ರಬುದ್ಧ ಪಾಟೀಲ, ಸೋಮು ಹೊರಟ್ಟಿ ನಿರೂಪಿಸಿದರೆ, ಮಹಾದೇವ ಬೆಳ್ಳೆನವರ್‌, ಯಲ್ಲಾಲಿಂಗ ಸಲಗರ ಉಪಸ್ಥಿತರಿದ್ದರು.  

ಅಪ್ಪಾಜಿ ಕಲಾ ಬಳಗದಿಂದ ಸಂಗೀತ ಕಾರ್ಯಕ್ರಮ ಮನ ಸೆಳೆಯಿತು.

ಶರಣಮಂಟಪ: ಆಳಂದ ಪಟ್ಟಣದ ಶರಣನಗರದ ಶರಣಮಂಟಪದಲ್ಲಿ ಗುರುಪೂರ್ಣಿಮೆ ನಿಮಿತ್ತ ಬೆಳಿಗ್ಗೆ ಭಕ್ತರಿಂದ ಚನ್ನಬಸವ ಪಟ್ಟದೇವರಿಗೆ ಗುರುವಂದನೆ ಸಲ್ಲಿಸಲಾಯಿತು. ಚ್ನಬಸವ ಪಟ್ಟದೇವರ 41ನೇ ಜನ್ಮದಿನದ ನಿಮಿತ್ತ 41 ಜನ ಮಠದ ಸೇವಾ ಕಾರ್ಯಕರ್ತರಿಗೆ ಸತ್ಕರಿಸಲಾಯಿತು. ಬಳಿಕ ಪೀಠಾಧಿಪತಿಗಳ ಪಾದಪೂಜೆ, ಕಿರೀಟ ಧಾರಣೆ ಕಾರ್ಯಕ್ರಮ ಜರಗಿದವು. ಸೂರ್ಯಕಾಂತ ತಟ್ಟಿ, ಭೀಮಣ್ಣಾ ಶೆಟಗೋಂಡೆ, ಸೂರ್ಯಕಾಂತ ಘಸನೆ, ಸುಭಾಷ ಬಳೂರ್ಗಿ, ಚಂದ್ರಕಾಂತ ಪೂಲಾರೆ, ಧರ್ಮಲಿಂಗ ಜಗದೆ ಭಾಗವಹಿಸಿದ್ದರು.

ಹಿರೇಮಠ: ಪಟ್ಟಣದ ಹಿರೇಮಠದಲ್ಲಿ ಪೀಠಾಧಿಪತಿ ಸಿದ್ದೇಶ್ವರ ಸ್ವಾಮೀಜಿಗಳಿಗೆ ಭಕ್ತರಿಂದ ಗುರುಪೂರ್ಣಿಮೆ ನಿಮಿತ್ತ ವಿಶೇಷ ಪೂಜೆ, ಸತ್ಕಾರ ನಡೆಯಿತು.

ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ, ಚಲಗೇರಾದಲ್ಲಿ ಪೀಠಾಧಿಪತಿ ವೀರಶಾಂತಲಿಂಗ ಸ್ವಾಮೀಜಿ, ಹೊದಲೂರಿನಲ್ಲಿ ವೃಷಭೇಂದ್ರ ಸ್ವಾಮೀಜಿ, ಮಾಡಿಯಾಳ, ದೇವಂತಗಿ, ನರೋಣಾ, ಬಿಲಗುಂದಿ, ಕಡಂಗಂಚಿ, ನಿಂಬರ್ಗಾ, ಭುಸನೂರು ಮಠಗಳಲ್ಲಿ ಭಕ್ತರು ಗುರುಪೂರ್ಣಿಮೆ ನಿಮಿತ್ತ ಪೀಠಾಧಿಪತಿಗಳಿಗೆ ವಿಶೇಷ ಗೌರವ ಸಲ್ಲಿಸಿ ಗುರುವಂದನೆ ಸಲ್ಲಿಸಿದರು.

ಆಳಂದ ಪಟ್ಟಣದಲ್ಲಿ ಗುರುಪೂರ್ಣಿಮಾ ನಿಮಿತ್ತ ವಿಶೇಷ ಪೂಜೆ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.