ADVERTISEMENT

ಜಿಲ್ಲೆಯಾದ್ಯಂತ ‌ಭಾರಿ ಮಳೆ; ಕೆಲವೆಡೆ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 11:13 IST
Last Updated 12 ಅಕ್ಟೋಬರ್ 2020, 11:13 IST
ಕಲಬುರ್ಗಿ ಜಿಲ್ಲೆ‌ ಕಾಳಗಿ ತಾಲ್ಲೂಕಿನ ರುಮ್ಮನಗೂಡ ಗ್ರಾಮದ ಬಳಿ ಪ್ರವಾಹ ಸೃಷ್ಟಿಸಿರುವ ಮಳೆ
ಕಲಬುರ್ಗಿ ಜಿಲ್ಲೆ‌ ಕಾಳಗಿ ತಾಲ್ಲೂಕಿನ ರುಮ್ಮನಗೂಡ ಗ್ರಾಮದ ಬಳಿ ಪ್ರವಾಹ ಸೃಷ್ಟಿಸಿರುವ ಮಳೆ   

ಕಲಬುರ್ಗಿ: ವಾಯುಭಾರ ಕುಸಿತದಿಂದಾಗಿ ಜಿಲ್ಲೆಯಲ್ಲಿ ‌ಸತತ ಮೂರನೇ ದಿನವಾದ ‌ಸೋಮವಾರ ಭಾರಿ ಮಳೆ ಸುರಿದಿದೆ.

ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಊರುಗಳನ್ನು ಸಂಪರ್ಕಿಸುವ ಸೇತುವೆಗಳ ಮೇಲೆ ಹಳ್ಳಗಳು ಉಕ್ಕಿ ಹರಿಯುತ್ತಿವೆ‌.

ಕಲಬುರ್ಗಿ ನಗರ, ಚಿಂಚೋಳಿ, ಕಾಳಗಿ, ಕಮಲಾಪುರ, ಚಿತ್ತಾಪುರ, ಸೇಡಂ ಹಾಗೂ ಜೇವರ್ಗಿ ತಾಲ್ಲೂಕಿನ ಹಲವೆಡೆ ಮಳೆಯ ಅರ್ಭಟ ಮುಂದುವರೆದಿದೆ.

ADVERTISEMENT

ಕಾಳಗಿ ತಾಲ್ಲೂಕಿನ ಕೋರವಾರ ಗ್ರಾಮದ ಬಳಿ ಸೇತುವೆ ತುಂಬಿ ಹರಿಯುತ್ತಿದ್ದು ಸಾರಿಗೆ ಸಂಸ್ಥೆ ಬಸ್ ಸೇರಿದಂತೆ ಹಲವು ವಾಹನಗಳು ‌ಸೇತುವೆ ದಡದಲ್ಲಿ ‌ನಿಂತಿವೆ.

ಕಮಲಾಪುರದ ಮರಗುತ್ತಿ ತಾಂಡಾದ ಬೆಟ್ಟದ ಮೇಲೆ ಸೀತಾಫಲ ಹಣ್ಣು ತರಲು ಹೋಗಿದ್ದ ಶಾಂತಾಬಾಯಿ ಹೋಬು ರಾಡೋಡ (40) ಹಳ್ಳ ದಾಟುವ ಪ್ರಯತ್ನದಲ್ಲಿದ್ದಾಗ ರಭಸಕ್ಕೆ ‌ಕೊಚ್ಚಿಕೊಂಡು ಹೋಗಿದ್ದು, ಅರ್ಧ ಕಿ.ಮೀ. ದೂರದಲ್ಲಿ ಅವರ ಶವ ಮರದ ಮೇಲೆ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.