ADVERTISEMENT

ಲಾಕ್‌ಡೌನ್‌ | ಆರ್ಥಿಕ ನೆರವಿಗೆ ಹೂಗಾರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮೇ 2020, 11:27 IST
Last Updated 19 ಮೇ 2020, 11:27 IST
ಅಫಜಲಪುರದಲ್ಲಿ ಹೂಗಾರ ಸಮಾಜದ ಮುಖಂಡರು ಮುಖ್ಯಮಂತ್ರಿಗಳಿಗೆ ಬರದ ಮನವಿಪತ್ರವನ್ನು ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಅವರಿಗೆ ಸೋಮವಾರ ಸಲ್ಲಿಸಿದರು
ಅಫಜಲಪುರದಲ್ಲಿ ಹೂಗಾರ ಸಮಾಜದ ಮುಖಂಡರು ಮುಖ್ಯಮಂತ್ರಿಗಳಿಗೆ ಬರದ ಮನವಿಪತ್ರವನ್ನು ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಅವರಿಗೆ ಸೋಮವಾರ ಸಲ್ಲಿಸಿದರು   

ಅಫಜಲಪುರ: ‘ಲಾಕ್‍ಡೌನ್‌ನಿಂದಾಗಿ ಹೂಗಾರ ಸಮುದಾಯದ ಲಕ್ಷಾಂತರ ಜನರು ಕಾಯಕವಿಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ ಹೂಗಾರ ಸಮುದಾಯದವರಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು’ ಎಂದು ಅಫಜಲಪುರ ತಾಲ್ಲೂಕು ಹೂಗಾರ ಸಮಾಜದ ಅಧ್ಯಕ್ಷ ಮಡಿವಾಳ ಹೂಗಾರ ಸೋಮವಾರ ಇಲ್ಲಿ ಆಗ್ರಹಿಸಿದರು.

ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು, ‘ಸರ್ಕಾರವು ಕೊರೊನಾ ಹಿನ್ನೆಲೆಯಲ್ಲಿ ಶ್ರಮಿಕರಿಗೆ ವಿಶೇಷ ಅನುದಾನ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಹೂಗಾರ ಸಮುದಾಯವನ್ನು ಕಡೆಗಣಿಸಿರುವುದನ್ನು ನಾವು ಖಂಡಿಸುತ್ತೇವೆ’ ಎಂದರು.

ತಾಲ್ಲೂಕು ಕಬ್ಬ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಮಾತನಾಡಿ,‘ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಹೂಗಾರರು ಪ್ರತಿಯೊಂದು ಸಮಾಜಕ್ಕೂ ಬೇಕು. ಅವರ ಕೊಡುಗೆಯನ್ನು ಗಮನಿಸಿ ಸರ್ಕಾರ ಕೂಡಲೇ ವಿಶೇಷ ಆರ್ಥಿಕ ನೆರವು ಘೋಷಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮುಖಂಡರಾದ ರೇವಣಸಿದ್ಧ ಹೂಗಾರ, ಬಸವರಾಜ ಹೂಗಾರ, ಶರಣಪ್ಪ ಅವಟೆ, ಸಿದ್ದು ಹೂಗಾರ, ಶ್ರೀಶೈಲ ಹೂಗಾರ, ವಿಕಾಸ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.