ADVERTISEMENT

ಸಿದ್ದಗಂಗಾ ಶ್ರೀಗಳ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 14:16 IST
Last Updated 1 ಏಪ್ರಿಲ್ 2025, 14:16 IST
ಚಿಂಚೋಳಿ ತಾಲ್ಲೂಕಿನ ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿಯನ್ನು ಮಂಗಳವಾರ ಕರುಣೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಆಚರಿಸಲಾಯಿತು
ಚಿಂಚೋಳಿ ತಾಲ್ಲೂಕಿನ ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿಯನ್ನು ಮಂಗಳವಾರ ಕರುಣೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಆಚರಿಸಲಾಯಿತು   

ಚಿಂಚೋಳಿ: ತಾಲ್ಲೂಕಿನ ನಿಡಗುಂದಾ ಗ್ರಾಮದ ಕಂಚಾಳಕುಂಟಿ ನಂದೀಶ್ವರ ಮಠದಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಜಯಂತಿ ಪ್ರಯುಕ್ತ ಅವರನ್ನು ಮಂಗಳವಾರ ಸ್ಮರಿಸಲಾಯಿತು.

ಶ್ರೀಮಠದ ಕರುಣೇಶ್ವರ ಶಿವಾಚಾರ್ಯರು ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀಗಳೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಸುರೇಶ ಪಾಟೀಲ ಕುಸನೂರ, ವೀರಭದ್ರಯ್ಯ ಸ್ವಾಮಿ, ಕರಿಯಪ್ಪ ಪೂಜಾರಿ, ಹಾಗೂ ಶ್ರೀಮಠದ ಪ್ರಸಾದ ನಿಲಯದ ಮಕ್ಕಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT