ಅಫಜಲಪುರ: ‘ಬಡವರು, ಕಾರ್ಮಿಕರ ಹಸಿವು ತಣಿಸಲು ರಾಜ್ಯ ಸರ್ಕಾರ ಕಡಿಮೆ ಹಣದಲ್ಲಿ ಊಟ ನೀಡುವ ಇಂದಿರಾ ಸ್ಥಾಪಿಸಿದೆ. ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಅವರು ಮಾತನಾಡಿದರು.
‘ಗುತ್ತಿಗೆದಾರರು ಮಾರ್ಗಸೂಚಿಯಂತೆ ಗುಣಮಟ್ಟದ ಆಹಾರ ನೀಡಬೇಕು. ಆಹಾರದ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
ಪುರಸಭೆ ಅಧ್ಯಕ್ಷೆ ಸುಹಾಸಿನಿ ಖೇಳಗಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ತಹಶಿಲ್ದಾರ್ ಸಂಜೀವಕುಮಾರ ದಾಸರ, ಯೋಜನಾ ನಿರ್ದೇಶಕ ಮುನಾವರ್ ದೌಲಾ, ಉಪಾಧ್ಯಕ್ಷ ಶಿವು ಪದಕಿ, ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಪ್ರಮುಖರಾದ ಮತೀನ್ ಪಟೇಲ್, ಶಿವಾನಂದ ಗಾಡಿಸಾಹುಕಾರ, ಚಂದು ದೇಸಾಯಿ, ರಮೇಶ ಪೂಜಾರಿ, ನಾನಾಗೌಡ ಪಾಟೀಲ, ಶರಣು ಕುಂಬಾರ, ಸೈಪನಸಾಬ ಚಿಕ್ಕಳಗಿ, ಅಂಬರೀಶ ಬುರಲಿ, ರಾಜಶೇಖರ ಪಾಟೀಲ, ಸಂತೋಷ ಚಲವಾದಿ, ಅಜಯ, ಸಂತೋಷ ಚಲವಾದಿ, ಪ್ರವೀಣ ಕಲ್ಲೂರ ಇತರರಿದ್ದರು.
‘10 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಿ’: ‘ಪಟ್ಟಣದಲ್ಲಿ ನಗರೋತ್ಥಾನ 4ನೇ ಹಂತದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ, ಚರಂಡಿ, ರಸ್ತೆ ವಿಭಜಕ, ಬೀದಿ ದೀಪ ಕಾಮಗಾರಿಯ ಗುಣಮಟ್ಟದ ಜತೆಗೆ 10 ದಿನಗಳಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಇದಕ್ಕೆ ಸಂಬಂಧಪಟ್ಟವರನ್ನು ಅಮಾನತು ಮಾಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.