ADVERTISEMENT

International Yoga Day | ಕಲಬುರಗಿಯಲ್ಲೂ ಯೋಗಾಸನಗಳ ಸೊಬಗು

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 2:57 IST
Last Updated 21 ಜೂನ್ 2025, 2:57 IST
<div class="paragraphs"><p>ಕಲಬುರಗಿಯಲ್ಲಿ ನಡೆದ‌ ಯೋಗಾಸನ ಕಾರ್ಯಕ್ರಮದ‌ಲ್ಲಿ‌ ನೂರಾರು ಜನರು ಯೋಗಾಸ‌ನ ಅಭ್ಯಾಸ ಮಾಡಿದರು</p></div>

ಕಲಬುರಗಿಯಲ್ಲಿ ನಡೆದ‌ ಯೋಗಾಸನ ಕಾರ್ಯಕ್ರಮದ‌ಲ್ಲಿ‌ ನೂರಾರು ಜನರು ಯೋಗಾಸ‌ನ ಅಭ್ಯಾಸ ಮಾಡಿದರು

   

ಕಲಬುರಗಿ: 11ನೇ ಅಂತರರಾಷ್ಟ್ರೀಯ ಯೋಗ ದಿನದ‌ ಅಂಗವಾಗಿ ನಗರದ ಚಂದ್ರಶೇಖರ ಪಾಟೀಲ‌ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನೂರಾರು ಜನರು ಯೋಗಾಸನಗಳ ಅಭ್ಯಾಸ‌ ನಡೆಸಿದರು.

ಬೆಳಿಗ್ಗೆ ಸರಿಯಾಗಿ 7 ಗಂಟೆಗೆ ಶುರುವಾದ‌ ಕಾರ್ಯಕ್ರಮದಲ್ಲಿ ಮೊದಲಿಗೆ ಒಂದು ನಿಮಿಷ‌ ಪ್ರಾರ್ಥಿಸಲಾಯಿತು. ಬಳಿಕ ಯೋಗಾಸನ ಮಾಡುವ ಮುನ್ನ ಎಂಟು ನಿಮಿಷ ದೇಹದ ಚಲನ ಕ್ರಿಯೆ ಹೆಚ್ಚಿಸುವ‌ ವಾರ್ಮ್ಅಪ್ ಮಾಡಲಾಯಿತು.

ADVERTISEMENT

ಬಳಿಕ ಬೆಳಿಗ್ಗೆ 7.11ರಿಂದ ಯೋಗಾಸನದ‌ ಅಭ್ಯಾಸ ನಡೆಸಲಾಯಿತು.‌ ಮೊದಲಿಗೆ ತಾಡಾಸನದಿಂದ ಶುರುವಾಗಿ ಶವಾಸನ ತನಕ ಮುದ್ರಿತ‌ ಧ್ವನಿಯನ್ನು ಅನುಸರಿಸಿ ಯೋಗಾಸ‌ನ‌ ನಡೆಸಲಾಯಿತು.

ಬಳಿಕದ ನಿಮಿಷಗಳಲ್ಲಿ ಮೂರು ಸುತ್ತುಗಳಲ್ಲಿ ಕಪಾಲಭಾತಿ, ನಾಡಿಶೋಧನ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ, ಭ್ರಾಮರಿ‌ ಪ್ರಾಣಾಯಾಮ ಮಾಡಿ ಧ್ಯಾನದೊಂದಿಗೆ ಸಂಪನ್ನಗೊಳಿಸಲಾಯಿತು.

ಕಲಬುರಗಿ ‌ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕಲಬುರಗಿ ‌ನಗರ‌ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು‌ ಶ್ರೀನಿವಾಸುಲು,ಕೆಕೆಸಿಸಿಐ ಅಧ್ಯಕ್ಷ ‌ಶರಣಬಸಪ್ಪ ಪಪ್ಪಾ‌, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಕಲಬುರಗಿ ಆಯುಷ್ ಇಲಾಖೆ ಹಾಗೂ ಮಾನವೀಯ ಕಲ್ಯಾಣ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಉಚಿತ ಆಯುರ್ವೇದ ಆರೋಗ್ಯ ಶಿಬಿರವೂ‌ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.